ಮಳೆ, ಗಾಳಿಯಿಂದ ಕುಸಿದ ಬೈಸಿಕಲ್ ನಿಲ್ದಾಣ

dvg-rain-13.jpg
Published on

ದಾವಣಗೆರೆ : ಶನಿವಾರ ಸಂಜೆ ಸುರಿದ ಮಳೆ ಹಾಗೂ ಗಾಳಿಗೆ ನಗರದ ಹೊಂಡದ ವೃತ್ತದ ಬಳಿಯ ಬೈಸಿಕಲ್ ನಿಲ್ದಾಣ ನೆಲಕ್ಕುರುಳಿದೆ.
 ನಿಲ್ದಾಣದ ಭಾಗವು ಕುಸಿದು ಎಗ್‌ರೈಸ್ ವ್ಯಾಪಾರದ ತಳ್ಳುಗಾಡಿಯ ಮೇಲೆ ಬಿದ್ದಿತು, ಯಾರಿಗೂ ತೊಂದರೆಯಾಗಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.
 ಸಾರ್ವಜನಿಕರು ಬೈಸಿಕಲ್‌ಗಳನ್ನು ಉಪಯೋಗಿಸಲು ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ವಿವಿಧೆಡೆ ನಿಲ್ದಾಣಗಳನ್ನು ಮಾಡಲಾಗಿದೆ. ಆದರೆ ಮಳೆ, ಗಾಳಿಯಿಂದ ಬಿದ್ದಿರುವ ನಿಲ್ದಾಣವು ಇದುವರೆಗೆ ತಮಗೆ ಹಸ್ತಾಂತರವಾಗಿಲ್ಲ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ್ ತಿಳಿಸಿದರು.
 ದಾವಣಗೆರೆ ತಾಲೂಕಿನ ಹೆಬ್ಬಾಳು, ಹುಣಸೇಕಟ್ಟೆ, ಹಾಲುವರ್ತಿ ಸೇರಿ ವಿವಿಧೆಡೆ ಮಳೆಯಾಗಿದೆ. ಇದರಿಂದ ವಾತಾವರಣದಲ್ಲಿ ತಂಪು ಆವರಿಸಿತ್ತು. ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net