ಜಿಲ್ಲೆಯ 5.80 ಕಿ.ಮೀ. ಗ್ರಾಮೀಣ ರಸ್ತೆಗೆ ಹಾನಿ

house.jpg
Published on

ದಾವಣಗೆರೆ : ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಜಿಲ್ಲೆಯ 5.80 ಕಿ.ಮೀ. ಗ್ರಾಮೀಣ ರಸ್ತೆ ಹಾನಿಗೊಳಗಾಗಿದೆ. 2 ಸೇತುವೆ, 4 ಕೆರೆ ಹಾಗೂ 3 ಶಾಲೆಗಳು ಮಳೆಯ ಪ್ರಕೋಪಕ್ಕೆ ಒಳಗಾಗಿವೆ. 372 ವಿದ್ಯುತ್ ಕಂಬಗಳು ಮತ್ತು 1 ಟ್ರಾನ್ಸ್‌ಫಾರ್ಮರ್‌ಗೆ ಧಕ್ಕೆಯಾಗಿದ್ದು ದುರಸ್ತಿಪಡಿಸಲಾಗಿದೆ.
 ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ವಿಡಿಯೋ ಸಂವಾದದಲ್ಲಿ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ನೀಡಿದ ಮಾಹಿತಿಯಿದು.
 ಹರಿಹರ ತಾಲೂಕು ನಂದಿಗುಡಿ-ಪತ್ಯಾಪುರ ರಸ್ತೆ ಸಂಪರ್ಕ ಕಡಿತವಾಗಿದ್ದರಿಂದ ಸಾರ್ವಜನಿಕರು ನಂದಿಗುಡಿಯಿಂದ ತುಮ್ಮಿನಕಟ್ಟೆ , ಮಲ್ಲನಾಯಕನಹಳ್ಳಿ ಮಾರ್ಗವಾಗಿ, ತುಮ್ಮಿನಕಟ್ಟೆ, ಸಣ್ಣ ಸಂಗಾಪುರ-ಉಕ್ಕಡಗಾತ್ರಿ ಮಾರ್ಗವಾಗಿ ಹಾಗೂ ಹರಿಹರದಿಂದ ಎಣ್ಣೆಹೊಸಳ್ಳಿ ಕ್ರಾಸ್‌ನಿಂದ ಆನ್ವೇರಿ ಮೂಲಕ ಪರ್ಯಾಯ ಮಾರ್ಗವನ್ನು ಬಳಸಬೇಕಾಗಿದೆ.
 ಭಾನುವಳ್ಳಿಯಿಂದ ಲಕ್ಕಶೆಟ್ಟಿಹಳ್ಳಿ ಜಮೀನುಗಳಿಗೆ ಹೋಗುವ ಸೇತುವೆ ಕುಸಿದಿದ್ದು ಇದರ ಪರಿಣಾಮವಾಗಿ ಸಾರ್ವಜನಿಕರು ಲಕ್ಕಶೆಟ್ಟಿಹಳ್ಳಿ ಗ್ರಾಮದ ಹತ್ತಿರ ಭಾನುವಳ್ಳಿಯಿಂದ 5 ಕಿ.ಮೀ. ಹೊಳೆಸಿರಿಗೆರೆ ಮಾರ್ಗವಾಗಿ ಸಂಚರಿಸಬಹುದು ಅಥವಾ ಕಮಲಾಪುರ ಮಾರ್ಗವನ್ನು ಬಳಸಬಹುದು.
 ಜಿಲ್ಲೆಯ 11 ಮನೆಗಳಿಗೆ ತೀವ್ರ, 58 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈ ಪೈಕಿ ಈಗಾಗಲೇ 19 ಮನೆಗಳ ಸಂತ್ರಸ್ತರಿಗೆ ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗಿದೆ.
 ಮೇನಲ್ಲಿ ಮಳೆಯಿಂದ 2 ಜಾನುವಾರು ಮೃತಪಟ್ಟಿವೆ. 19 ಮನೆಗಳಿಗೆ ಹಾನಿಯಾಗಿದೆ.
 ಮೇ ತಿಂಗಳಲ್ಲಿ 407 ಹೆಕ್ಟೇರ್ ಭತ್ತ, 37.63 ಹೆಕ್ಟೇರ್ ಬಾಳೆ, 5 ಹೆಕ್ಟೇರ್ ಪಪ್ಪಾಯ, ನುಗ್ಗೆ 1 ಹೆಕ್ಟೇರ್ ಸೇರಿ ಒಟ್ಟು 450 ಹೆಕ್ಟೇರ್ ಬೆಳೆ ಹಾನಿಯಾಗಿದೆ.
 ಜಿಲ್ಲೆಯ 322 ಕೆರೆಗಳ ಪೈಕಿ 22 ಹಿಂದಿನ ವರ್ಷದಲ್ಲಿ ತುಂಬಿ, ಈ ವರ್ಷ ಖಾಲಿಯಾಗಿವೆ. 111 ಕೆರೆಗಳು ಶೇ. 30ರಷ್ಟು, 125 ಕೆರೆಗಳು ಶೇ. 31ರಿಂದ 50ರ ವರೆಗೆ, 64 ಕೆರೆಗಳು ಶೇ. 51ಕ್ಕಿಂತ ಹೆಚ್ಚು ತುಂಬಿವೆ.
 ಸದ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಟ್ಯಾಂಕರ್ ಮೂಲಕ ಪೂರೈಕೆಯಾಗಲಿ, ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯುವುದಾಗಲಿ ಇಲ್ಲ.
 48 ವಾರಗಳ ವರೆಗೆ ಉಪಯೋಗಿಸುವಷ್ಟು ಮೇವಿನ ಲಭ್ಯತೆ ಇದೆ. ಜಿಲ್ಲೆಗೆ ಅಗತ್ಯವಿರುವ ವಿವಿಧ ಶ್ರೇಣಿಯ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಹಂತ ಹಂತವಾಗಿ ದಾಸ್ತಾನು ಮಾಡಿ ವಿತರಿಸಲು ಕ್ರಮ ವಹಿಸಲಾಗಿದೆ.
 ...
 * ಇದುವರೆಗೆ ಮೂವರ ಸಾವು
 ವರುಣನ ಆರ್ಭಟಕ್ಕೆ ಜಿಲ್ಲೆಯಲ್ಲಿ ಇದುವರೆಗೆ 3 ಜೀವಗಳು ಬಲಿಯಾಗಿವೆ. ಜೂನ್ 9ರಂದು ಜಗಳೂರು ತಾಲೂಕಿನಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದರು. ಜು. 25 ರಂದು ಹರಿಹರ ತಾಲೂಕಿನಲ್ಲಿ ಮನೆಯ ಗೋಡೆ ಕುಸಿದು ಹೆಣ್ಣು ಮಗುವೊಂದು ಕೊನೆಯುಸಿರೆಳೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net