

ದಾವಣಗೆರೆ : ಜಿಲ್ಲೆಯಲ್ಲಿ ಗುರುವಾರ ಸರಾಸರಿ 14.1 ಮಿ.ಮೀ. ಮಳೆಯಾಗಿದೆ. 12 ಮನೆಗಳಿಗೆ ಹಾನಿಯಾಗಿದ್ದು ಒಟ್ಟು 10.21 ಲಕ್ಷ ರೂ. ನಷ್ಟವಾಗಿದೆ. ಚನ್ನಗಿರಿ ತಾಲೂಕಿನಲ್ಲಿ 9, ಹೊನ್ನಾಳಿ ತಾಲೂಕಿನಲ್ಲಿ 2, ದಾವಣಗೆರೆ ತಾಲೂಕಿನಲ್ಲಿ 1 ಮನೆಗೆ ಹಾನಿಯಾಗಿದೆ. ಚನ್ನಗಿರಿ ತಾಲೂಕಿನಲ್ಲಿ 22.6 ಮಿ.ಮೀ, ದಾವಣಗೆರೆ-17.5 ಮಿ.ಮೀ, ಹರಿಹರ-19.5 ಮಿ.ಮೀ, ಹೊನ್ನಾಳಿ-14.5 ಮಿ.ಮೀ, ಜಗಳೂರು-1.6 ಮಿ.ಮೀ. ನ್ಯಾಮತಿ ತಾಲೂಕಿನಲ್ಲಿ 3.7 ಮಿ.ಮೀ. ಮಳೆಯಾಗಿದೆ.