ದಾವಣಗೆರೆ ಜಿಲ್ಲೆಯ ವಿವಿಧೆಡೆ ಮಳೆ

chn-may-12-male-3.jpg
Published on

ದಾವಣಗೆರೆ :  ದಾವಣಗೆರೆ ಸೇರಿ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಗುಡುಗು ಸಹಿತ ಮಳೆ ಸುರಿಯಿತು.  ಚನ್ನಗಿರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದ್ದರಿಂದ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಕೃಷಿ ಇಲಾಖೆ ಕಚೇರಿ ಹಾಗೂ ಅಂಗಡಿಯೊಂದರ ಒಳಗೆ ನೀರು ನುಗ್ಗಿತ್ತು. ಕೆಲ ವಾಹನಗಳು ನೀರಿನಲ್ಲಿ ಅರ್ಧ ಮುಳುಗಿದ್ದವು. ತಾಲೂಕಿನ ದಿಗ್ಗೆನಹಳ್ಳಿ, ಲಕ್ಷ್ಮೀಸಾಗರ, ಹರೋನಹಳ್ಳಿ, ಅಜ್ಜಿಹಳ್ಳಿಯಲ್ಲಿ ಉತ್ತಮ ಮಳೆಯಾಗಿದೆ.  ನ್ಯಾಮತಿ ಪಟ್ಟಣ ಸೇರಿದಂತೆ ತಾಲೂಕಿನ ಸುರಹೊನ್ನೆ, ಸಾಲಬಾಳು, ಸವಳಂಗ ಸುತ್ತಮುತ್ತ ಮಧ್ಯಾಹ್ನ ಅರ್ಧ ಗಂಟೆಗಿಂತ ಹೆಚ್ಚು ಕಾಲ ಗುಡುಗು, ಗಾಳಿ ಸಹಿತ ಬಿರುಸಿನಿಂದ ಮಳೆ ಸುರಿಯುವ ಮೂಲಕ ತಂಪೆಯಿತು.  ದಾವಣಗೆರೆ ನಗರದಲ್ಲಿ ಸ್ವಲ್ಪ ಹೊತ್ತು ಗುಡುಗು ಸಹಿತ ಸಾಧಾರಣ ಮಳೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net