ಮಳೆ, ಗಾಳಿಗೆ 22 ಹೆಕ್ಟೇರ್ ಬೆಳೆ ಹಾನಿ

21myk1-a.jpg
Published on

ದಾವಣಗೆರೆ : ಜಿಲ್ಲೆಯಲ್ಲಿ ಭಾನುವಾರ ಸುರಿದ ಮಳೆ ಹಾಗೂ ಗಾಳಿಯಿಂದ 22.16 ಹೆಕ್ಟೇರ್ ಬಾಳೆ ಮತ್ತು ಅಡಕೆ ಬೆಳೆ ಹಾನಿಗೀಡಾಗಿವೆ.  ದಾವಣಗೆರೆ ತಾಲೂಕಿನ ಆನಗೋಡು ಹೋಬಳಿ ಕುರುಡಿ, ಕಿತ್ತೂರು, ಹೆಮ್ಮನಬೇತೂರು, ಚಿಕ್ಕವನಾಗ್ತಿಹಳ್ಳಿ ಸೇರಿ ಹಲವಾರು ಗ್ರಾಮಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ವಿವಿಧೆಡೆ ಒಟ್ಟು 10 ಹೆಕ್ಟೇರ್ ಬಾಳೆ ಹಾಗೂ 8.16 ಹೆಕ್ಟೇರ್ ಅಡಕೆಗೆ ಹಾನಿಯಾಗಿದೆ. ಕಟಾವಿಗೆ  ಬಂದಿದ್ದ ಪಪ್ಪಾಯ ಕಾಯಿಗಳು ಬಿದ್ದು ನಷ್ಟ ಸಂಭವಿಸಿದೆ. ಜಗಳೂರು ತಾಲೂಕಿನಲ್ಲಿ 4 ಹೆಕ್ಟೇರ್ ಬಾಳೆ ಬೆಳೆಗೆ ಹಾನಿಯಾಗಿದೆ.  ಮಳೆಯಿಂದ ಹೊನ್ನಾಳಿ ಹಾಗೂ ಜಗಳೂರು ತಾಲೂಕಿನಲ್ಲಿ ತಲಾ ಒಂದು ಮನೆಗೆ ಹಾನಿಯಾಗಿದೆ. ದಾವಣಗೆರೆ ತಾಲೂಕಿನ ಕಿತ್ತೂರು ಗ್ರಾಮದ ಜಮಿನಿನಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಶೀಟ್ ಕೆಳಗೆ ಬಿದ್ದಿದೆ.  ದಾವಣಗೆರೆಯಲ್ಲಿ ಸಂಜೆ ಸಿಡಿಲು, ಗುಡುಗಿನೊಂದಿಗೆ ಮಳೆ ಆರ್ಭಟಿಸಿತು. ಇದರಿಂದಾಗಿ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು.  ...    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net