

ದಾವಣಗೆರೆ : ಜಿಲ್ಲೆಯಲ್ಲಿ ಮಳೆಯಿಂದ 32 ಎಕರೆ ಬೆಳೆ ಹಾಗೂ 38 ಮನೆಗಳಿಗೆ ಹಾನಿಯಾಗಿದ್ದು 32.90 ಲಕ್ಷ ರೂ. ನಷ್ಟ ಸಂಭವಿಸಿದೆ. ದಾವಣಗೆರೆ ತಾಲೂಕು ದೇವರಟ್ಟಿ ಮತ್ತು ಬೂಸವನಹಟ್ಟಿ ಗ್ರಾಮಗಳ ಹಳ್ಳದ ಪಕ್ಕದ ಗದ್ದೆಗಳಿಗೆ ನೀರು ನುಗ್ಗಿ 15 ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಕಕ್ಕರಗೊಳ್ಳ ಮತ್ತು ಕೋಡಿಹಳ್ಳಿ ಗ್ರಾಮಗಳಲ್ಲಿ 15 ಎಕರೆ ಭತ್ತ, ಕುರುಡಿ ಗ್ರಾಮದಲ್ಲಿ 2 ಎಕರೆ ಈರುಳ್ಳಿ ಬೆಳೆ ನಾಶವಾಗಿದೆ. ಶನಿವಾರ ಬೆಳಗ್ಗೆ ವರೆಗೆ 4.1 ಮಿ.ಮೀ. ಮಳೆಯಾಗಿದೆ. ಜಗಳೂರು ತಾಲೂಕಿನಲ್ಲಿ 11.2 ಮಿ.ಮೀ, ದಾವಣಗೆರೆ 4.9 ಮಿ.ಮೀ, ಹರಿಹರ 2.3 ಮಿ.ಮೀ, ಹೊನ್ನಾಳಿ 1.5 ಮಿ.ಮೀ, ಚನ್ನಗಿರಿ 0.6 ಮಿ.ಮೀ, ನ್ಯಾಮತಿ ತಾಲೂಕಿನಲ್ಲಿ 0.2 ಮಿ.ಮೀ. ಮಾತ್ರ ಮಳೆಯಾಗಿದೆ.