ಜಿಲ್ಲೆಯಲ್ಲಿ ಮಳೆ ಸೃಷ್ಟಿಸಿದ ಅವಾಂತರ

dvg-hospital.jpg
Published on

ದಾವಣಗೆರೆ : ಜಿಲ್ಲೆಯಲ್ಲಿ ಬುಧವಾರ ಬೆಳಗಿನ ವರೆಗೆ 22.7 ಮಿ.ಮೀ. ಮಳೆಯಾಗಿದ್ದು, ಬೆಳೆ ಮತ್ತು ಮನೆ ಹಾನಿ ಸೇರಿ 21.65 ಲಕ್ಷ ರೂ. ನಷ್ಟ ಸಂಭವಿಸಿದೆ.  ಮೆಕ್ಕೆಜೋಳ 15 ಹೆಕ್ಟೇರ್, ಈರುಳ್ಳಿ 3 ಹೆಕ್ಟೇರ್, ರಾಗಿ ಹಾಗೂ ಬಾಳೆ ಬೆಳೆ ತಲಾ 1 ಹೆಕ್ಟೇರ್ ಹಾನಿಗೊಳಗಾಗಿವೆ. 22 ಮನೆಗಳು ಜಖಂ ಗೊಂಡಿವೆ.  ದಾವಣಗೆರೆ ತಾಲೂಕಿನಲ್ಲಿ ಅತಿ ಹೆಚ್ಚು 30 ಮಿ.ಮೀ. ಮಳೆಯಾಗಿದೆ. ಜಗಳೂರು-29.4 ಮಿ.ಮೀ, ಹೊನ್ನಾಳಿ-25.4 ಮಿ.ಮೀ, ಚನ್ನಗಿರಿ-20.2 ಮಿ.ಮೀ, ನ್ಯಾಮತಿ-13.7 ಮಿ.ಮೀ, ಹರಿಹರ ತಾಲೂಕಿನಲ್ಲಿ 5.4 ಮಿ.ಮೀ. ಮಳೆಯಾಗಿದೆ. ಬುಧವಾರ ಸಂಜೆಯೂ ಕೆಲ ಹೊತ್ತು ಬಿರುಸಿನ ಮಳೆ ಸುರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net