ತುಂಗಭದ್ರಾ ನದಿ ನೀರಿನ ಮಟ್ಟ ಏರಿಕೆ

rain_20240717001812657.jpg
Published on

ದಾವಣಗೆರೆ : ತುಂಗಾ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಜಿಲ್ಲೆಯಲ್ಲಿ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಹೊನ್ನಾಳಿಯಲ್ಲಿ ಮಂಗಳವಾರ ನೀರಿನ ಮಟ್ಟ 9.750 ಮೀಟರ್ ಆಗಿತ್ತು. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.  ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ವರೆಗೆ ಸರಾಸರಿ 19.5 ಮಿ.ಮೀ. ಮಳೆಯಾಗಿದೆ. ಚನ್ನಗಿರಿ ತಾಲೂಕಿನಲ್ಲಿ 6, ದಾವಣಗೆರೆ ತಾಲೂಕಿನಲ್ಲಿ 4 ಸೇರಿ ಒಟ್ಟು 10 ಮನೆಗಳಿಗೆ ಹಾನಿಯಾಗಿದೆ.  ನ್ಯಾಮತಿ ತಾಲೂಕಿನಲ್ಲಿ 50 ಮಿ.ಮೀ, ಹೊನ್ನಾಳಿ 34.7 ಮಿ.ಮೀ, ಚನ್ನಗಿರಿ ತಾಲೂಕಿನಲ್ಲಿ 20.7 ಮಿ.ಮೀ. ಮಳೆಯಾಗಿದೆ. ದಾವಣಗೆರೆ 15 ಮಿ.ಮೀ, ಹರಿಹರ 13 ಮಿ.ಮೀ, ಜಗಳೂರು ತಾಲೂಕಿನಲ್ಲಿ 6.1 ಮಿ.ಮೀ. ಮಳೆ ಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net