ಕಾರಿನ ಮೇಲೆ ಉರುಳಿದ ಮರದ ಕೊಂಬೆ

dvg-rain-15-1.jpg
Published on

ದಾವಣಗೆರೆ : ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಗಾಳಿ, ಮಳೆಯ ವಾತಾವರಣ. ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ.  ನಗರದ ತರಳಬಾಳು ಬಡಾವಣೆಯಲ್ಲಿ ಸೋಮವಾರ ಬೆಳಗ್ಗೆ ಮರದ ಕೊಂಬೆ ಹಾಗೂ ವಿದ್ಯುತ್ ಕಂಬ ಬಿದ್ದು ಮನೆಯೊಂದರ ಮುಂದೆ ನಿಲ್ಲಿಸಿದ್ದ ಕಾರು ಜಖಂ ಗೊಂಡಿದೆ.  ಗಾಳಿ, ಮಳೆಯ ಹೊಡೆತಕ್ಕೆ ಹಳೆಯ ಮರದ ಕೊಂಬೆಗಳು ಕತ್ತರಿಸಿ ಬಿದ್ದಿದ್ದು 3 ವಿದ್ಯುತ್ ಕಂಬಗಳು ಉರುಳಿವೆ. ಘಟನೆ ನಡೆಯುವ ಸ್ವಲ್ಪ ಹೊತ್ತು ಮುಂಚೆ ಮಹಿಳೆ ಹಾಗೂ ಮಗು ಅದೇ ರಸ್ತೆಯಲ್ಲಿ ಹೋಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು.  ಹಳೆಯ ಮರವಾಗಿದ್ದರಿಂದ ಅದನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಆಗಿರಲಿಲ್ಲ ಎಂದು ಸ್ಥಳೀಯರು ದೂರಿದರು.  ಇಡೀ ದಿನ ಮೋಡ ಕವಿದ ವಾತಾವರಣ, ಜಿಟಿ ಜಿಟಿ ಮಳೆಯಿಂದ ತಂಪಾದ ಹವಾಮಾನ ಉಂಟಾಗಿತ್ತು. ಚಿಕ್ಕಮಗಳೂರು, ಶಿವಮೊಗ್ಗ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಹೊನ್ನಾಳಿಯಲ್ಲಿ ನೀರಿನ ಮಟ್ಟ 9 ಮೀಟರ್ ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net