ರಾಘವೇಂದ್ರ ಸಪ್ತಾಹ ಆಯೋಜನೆಗೆ ನಿರ್ಧಾರ

IMG-20230702-WA0209.jpg
Published on

ದಾವಣಗೆರೆ : ಮಂತ್ರಾಲಯ ಹಾಗೂ ದಾವಣಗೆರೆಯ ಶ್ರೀ ರಾಘವೇಂದ್ರ ಸಪ್ತಾಹ ಸಮಿತಿ ವತಿಯಿಂದ 2024 ರ ಮಾರ್ಚ್ ತಿಂಗಳಲ್ಲಿ ನಗರದಲ್ಲಿ ಶ್ರೀ ರಾಘವೇಂದ್ರ ಸಪ್ತಾಹ ಕಾರ್ಯಕ್ರಮ ನಡೆಯಲಿದೆ.
ಇಲ್ಲಿನ ಕೆ.ಬಿ. ಬಡಾವಣೆ ರಾಯರ ಮಠದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಮಾಡಲಾಯಿತು.
ಒಂದು ವಾರ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿ ನಿತ್ಯ ಬೆಳಗ್ಗೆ ಸುಪ್ರಭಾತದಿಂದ ಆರಂಭವಾಗಿ ಸಂಜೆಯ ವರೆಗೆ ನಿರಂತರವಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು.
ಅಷ್ಟೋತ್ತರ, ಅಭಿಷೇಕ, ಲಕ್ಷ ಪುಷ್ಪಾರ್ಚನೆ, ಹೋಮ, ದಾಸವಾಣಿ, ನೃತ್ಯ ರೂಪಕ, ಶೋಭಾಯಾತ್ರೆ, ಮಹಿಳಾ ಗೋಷ್ಠಿ, ಭಜನೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಫಲಿಮಾರು, ವ್ಯಾಸರಾಜ ಮಠ, ಪೇಜಾವರ ಮಠದ ಶ್ರೀಪಾದಂಗಳವರೂ ಸೇರಿ ಅನೇಕ ಮಠಾಧೀಶರು ಭಾಗವಹಿಸಲಿದ್ದಾರೆ. ವಿವಿಧ ಪಂಡಿತರು ಉಪನ್ಯಾಸ ನೀಡುವರು. ಹಲವು ಭಜನಾ ಮಂಡಳಿಗಳು ಪಾಲ್ಗೊಳ್ಳಲಿವೆ.
ಈ ಉತ್ಸವವನ್ನು ಯಶಸ್ವಿಯಾಗಿಸಲು ಸಮಿತಿಗಳನ್ನು ರಚಿಸಿ ಪದಾಧಿಕಾರಿಗಳನ್ನು ನೇಮಿಸಲು, ಕಾರ್ಯಕ್ರಮ ಆಯೋಜನೆಗೆ ದಾನಿಗಳ ನೆರವು, ಭಕ್ತರ ಸಹಕಾರ ಪಡೆಯಲು ತೀರ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net