ಭಾರತೀಯ ಸೇನೆಗೆ ಶಕ್ತಿ ನೀಡಲು ಪ್ರಾರ್ಥನೆ

dvg-Prabha-Mallikarjun_20250510005226225.jpg
Published on

ದಾವಣಗೆರೆ :  ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಶುಕ್ರವಾರ ನಗರ ದೇವತೆ ದುರ್ಗಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ನಾಡಿನ ಸುಖ-ಶಾಂತಿ ಹಾಗೂ ಜನರ ಒಳಿತಿಗಾಗಿ ಪ್ರಾರ್ಥಿಸಿದರು.  ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ತೊಡಗಿರುವ ನಮ್ಮ ಭಾರತೀಯ ಸೇನೆಗೆ ಶಕ್ತಿ ಸ್ವರೂಪಿಣಿ ದುರ್ಗಾ ದೇವಿಯು ಮತ್ತಷ್ಟು ಶಕ್ತಿಯನ್ನು ಅನುಗ್ರಹಿಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net