ಚರಂಡಿ ದುರಸ್ತಿಗೆ ಆಗ್ರಹಿಸಿ ನಿವಾಸಿಗಳ ಪ್ರತಿಭಟನೆ

DVG-PISALE-11.jpg
Published on

ದಾವಣಗೆರೆ : ನಗರದ ಪಿ.ಜೆ.ಬಡಾವಣೆ ಪಿಸಾಳೆ ಕಾಂಪೌಂಡ್‌ನ ಮೂರನೇ ಕ್ರಾಸ್‌ನಲ್ಲಿ ಡ್ರೈನೇಜ್ ದುರಸ್ತಿಗೆ ಆಗ್ರಹಿಸಿ ಸ್ಥಳೀಯ ನಾಗರಿಕರು ಸೋಮವಾರ ಪ್ರತಿಭಟನೆ ನಡೆಸಿದರು.    ಸ್ಮಾರ್ಟ್ ಸಿಟಿಯಿಂದ ಹೊಸದಾಗಿ ಒಳಚರಂಡಿ ಮಾಡಿದಾಗಿನಿಂದ 15 ದಿನಕ್ಕೊಮ್ಮೆ ಡ್ರೈನೇಜ್ ನೀರು ಉಕ್ಕಿ ಹರಿಯುತ್ತಿದ್ದು, ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದಿದೆ ಎಂದು ಪಿಸಾಳೆ  ನಾಗರಾಜರಾವ್ ದೂರಿದರು.  ಸಮಸ್ಯೆ ನಿವಾರಣೆಗೆ ಪ್ರತಿಸಲ ಮನವಿ ಮಾಡಿದರೂ ವಾರ್ಡ್ ಸದಸ್ಯರು, ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಕೂಡಲೇ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.  ಮಧು ಪವಾರ್. ಪದ್ಮಾ ಜಾಧವ್, ಗಾಯತ್ರಿಬಾಯಿ, ಬೇಬಿ ರಾಗಿಣಿ,  ಭಾಗ್ಯಾ,  ಸೌಮ್ಯಾ, ಕವಿತಾ, ಆಶಾ, ಸುರೇಶ್, ರುದ್ರೇಶ್ ಕಾಂಪೌಂಡಿನ ನಿವಾಸಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net