

ದಾವಣಗೆರೆ : ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಆಯೋಜಿಸಿದ್ದ ‘ವಿಜಯೋತ್ಸವ 2024’ ರ ಲಕ್ಕಿ ಡ್ರಾ ವಿಜೇತರಿಗೆ ನಗರದ ವಿಜಯಲಕ್ಷ್ಮೀ ರಸ್ತೆಯ ಗಡಿಯಾರ ಕಂಬದ ಬಳಿಯ ಪವನ್ ಜ್ಯೂಯಲರ್ಸ್‌ನಲ್ಲಿ ಶನಿವಾರ ಬಹುಮಾನಗಳನ್ನು ವಿತರಿಸಲಾಯಿತು. ಪವನ್ ಜ್ಯೂಯಲರ್ಸ್ ಮಾಲೀಕ ಸಿ.ಕೆ. ತಮ್ಮಣ್ಣ ಅವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ವಿಜಯವಾಣಿಯ ‘ವಿಜಯೋತ್ಸವ’ ಕಾರ್ಯಕ್ರಮದಲ್ಲಿ ನಾವು ಪಾಲ್ಗೊಳ್ಳುತ್ತಿರುವುದು ಇದು ಮೂರನೇ ವರ್ಷವಾಗಿದೆ. ಇದರಿಂದ ನಮಗೆ ಬಹಳ ಅನುಕೂಲವಾಗಿದೆ ಎಂದು ತಿಳಿಸಿದರು. ಗ್ರಾಹಕರನ್ನು ತಲುಪಲು ಪತ್ರಿಕೆ ಒಳ್ಳೆಯ ಮಾಧ್ಯಮವಾಗಿದ್ದು ವಿಜಯವಾಣಿ ಜತೆಗೆ ಕೈಜೋಡಿಸಿದ್ದರಿಂದ ಹೆಚ್ಚು ಸಂಖ್ಯೆಯ ಗ್ರಾಹಕರನ್ನು ತಲುಪಲು ಸಾಧ್ಯವಾಗಿದೆ. ಈ ವರ್ಷ ಉತ್ತಮ ಸ್ಪಂದನೆ ದೊರಕಿದೆ. ವಿಜಯವಾಣಿ ಪತ್ರಿಕೆಯ ‘ವಿಜಯೋತ್ಸವ’ ಕಾರ್ಯಕ್ರಮದಿಂದ ನಮ್ಮ ಮತ್ತು ಗ್ರಾಹಕರ ನಡುವಿನ ಸಂಬಂಧ ಗಟ್ಟಿಯಾಗಲು ಸಹಾಯಕವಾಗಿದೆ ಎಂದು ಹೇಳಿದರು. ನಮ್ಮ ಅಂಗಡಿಯಲ್ಲಿ ಗುಣಮಟ್ಟದ ಆಭರಣಗಳು ದೊರೆಯುತ್ತವೆ. ಶುದ್ಧತೆಯ ಗ್ಯಾರಂಟಿ ಇದೆ. ಜನರ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ವ್ಯವಹಾರ ನಡೆದುಕೊಂಡು ಬಂದಿದೆ. ಗ್ರಾಹಕ ಸ್ನೇಹಿ ವಾತಾವರಣವಿದೆ. ಇಂದಿನ ಸ್ಪರ್ಧೆಯ ನಡುವೆ ವ್ಯಾಪಾರವನ್ನು ಇನ್ನಷ್ಟು ಬೆಳೆಸಿ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಪುತ್ರ ಕೆ.ಟಿ. ಕಿಶೋರ್ ಕುಮಾರ್ ಅವರು ತಂದೆಯ ಮಾರ್ಗದರ್ಶನದಲ್ಲಿ ವ್ಯಾಪಾರ ವೃದ್ಧಿಸಲು ಶ್ರಮಿಸುತ್ತಿದ್ದಾರೆ. ... (ಕೋಟ್) ನನ್ನ ಮಗಳಿಗೆ ಕಾಲ್ಗೆಜ್ಜೆ ಖರೀದಿಸಲು ಪವನ್ ಜ್ಯೂಯಲರ್ಸ್‌ಗೆ ಬಂದಾಗ ವಿಜಯವಾಣಿ ‘ವಿಜಯೋತ್ಸವ’ದ ಲಕ್ಕಿ ಡ್ರಾ ಬಗ್ಗೆ ತಿಳಿಯಿತು. ನನಗೆ ಬಹುಮಾನ ಬರಬಹುದು ಎಂಬ ನಿರೀಕ್ಷೆ ಇರಲಿಲ್ಲ. ರೆಫ್ರಿಜರೇಟರ್ ಬಂದಿದೆ ಎಂದು ತಿಳಿದಾಗ ಬಹಳ ಖುಷಿಯಾಯಿತು. ಎಲ್.ಡಿ. ಕಾವ್ಯಾ, ಚನ್ನಗಿರಿ ತಾಲೂಕು ಮರವಂಜಿ ಚಿತ್ರ: ಡಿವಿಜಿ ಪವನ್ ಜ್ಯೂಯಲರ್ಸ್ 1, 2 ದಾವಣಗೆರೆಯ ಪವನ್ ಜ್ಯೂಯಲರ್ಸ್‌ನಲ್ಲಿ ಶನಿವಾರ, ವಿಜಯವಾಣಿಯ ‘ವಿಜಯೋತ್ಸವ’ ವಿಜೇತರಿಗೆ ಮಾಲೀಕ ಸಿ.ಕೆ. ತಮ್ಮಣ್ಣ ಅವರು ಬಹುಮಾನ ವಿತರಿಸಿದರು. ಪುತ್ರ ಕೆ.ಟಿ. ಕಿಶೋರ್ ಕುಮಾರ್ ಇದ್ದರು. ...