ವಿಜಯೋತ್ಸವ ವಿಜೇತರಿಗೆ ಬಹುಮಾನ ವಿತರಣೆ

dvg-marula-siddeshwara.jpg
Published on

ದಾವಣಗೆರೆ :  ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ವತಿಯಿಂದ ಆಯೋಜಿಸಿದ್ದ ‘ವಿಜಯೋತ್ಸವ 2024’ ರ ಲಕ್ಕಿ ಡ್ರಾ ವಿಜೇತರಿಗೆ ನಗರದ ಮಂಡಿಪೇಟೆಯ ಶ್ರೀ ಮರುಳಸಿದ್ದೇಶ್ವರ ಜ್ಯೂಯಲರ್ಸ್‌ನಲ್ಲಿ ಶನಿವಾರ ಬಹುಮಾನಗಳನ್ನು ವಿತರಿಸಲಾಯಿತು.  ಶ್ರೀ ಮರುಳಸಿದ್ದೇಶ್ವರ ಜ್ಯೂಯಲರ್ಸ್‌ ಮಾಲೀಕ ಜಗದೀಶ ಮುದೇಗೌಡ್ರು ಅವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ವಿಜಯವಾಣಿಯ ‘ವಿಜಯೋತ್ಸವ’ ಕಾರ್ಯಕ್ರಮವು ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಒಳ್ಳೆಯ ಅವಕಾಶವಾಗಿದೆ ಎಂದು ತಿಳಿಸಿದರು.  ಅಂಗಡಿಗೆ ಬರುವ ಗ್ರಾಹಕರು ಕೊಡುಗೆಗಳ (ಆಫರ್) ಬಗ್ಗೆ ವಿಚಾರಿಸುತ್ತಾರೆ. ವಿಜಯವಾಣಿ ವಿಜಯೋತ್ಸವದ ಲಕ್ಕಿ ಡ್ರಾದಲ್ಲಿ ಪಾಲ್ಗೊಳ್ಳುವ ಮೂಲಕ ಗ್ರಾಹಕರಿಗೂ ಸಮಾಧಾನವಾಗುತ್ತದೆ. ನಮ್ಮ ವ್ಯಾಪಾರ ಹೆಚ್ಚಳಕ್ಕೂ ಇದರಿಂದ ಅನುಕೂಲವಾಗಲಿದೆ. ನಾವು ಮೊದಲ ಬಾರಿಗೆ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.  ನಮ್ಮ ಅಂಗಡಿಯು 1997 ರಲ್ಲಿ ಆರಂಭವಾಗಿದ್ದು 28 ವರ್ಷಗಳಿಂದ ಗ್ರಾಹಕರ ಮನಸ್ಸನ್ನು ಗೆದ್ದಿದೆ. ಇದೇ ಕಾರಣಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಅಷ್ಟೇ ಅಲ್ಲದೇ ಬೇರೆ ಜಿಲ್ಲೆಗಳಿಂದಲೂ ಜನರು ಬಂದು ಒಡವೆಗಳನ್ನು ಖರೀದಿಸುತ್ತಾರೆ.  ಗುಣಮಟ್ಟದ ಚಿನ್ನಕ್ಕೆ ನಾವು ಆದ್ಯತೆ ನೀಡುತ್ತೇವೆ. ಕೊಲ್ಲಾಪುರ ಸೇರಿದಂತೆ ವಿವಿಧ ರಾಜ್ಯಗಳ ಬಗೆ ಬಗೆಯ ವಿನ್ಯಾಸದ ಆಭರಣಗಳ ಸಂಗ್ರಹವಿದೆ ಎಂದು ತಮ್ಮ ಅಂಗಡಿಯ ವಿಶೇಷತೆಯನ್ನು ವಿವರಿಸಿದರು.  ತಾಯಿಯವರಾದ ಲಲಿತಮ್ಮ, ತಂದೆ ಮುದೇಗೌಡ್ರು ಪರಮೇಶ್ವರಪ್ಪ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿರುವ ಜಗದೀಶ ಮುದೇಗೌಡ್ರು ಅವರು ಚಿನ್ನ-ಬೆಳ್ಳಿ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತ ಬಂದಿದ್ದಾರೆ. ಪುತ್ರರಾದ ವಿನಯ್ ಹಾಗೂ ಸಮಂತ್ ಅವರು ತಂದೆಯ ಜತೆಗೆ ಕೈಜೋಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net