ಅನಾರೋಗ್ಯದಿಂದ ವಿಚಾರಣಾಧೀನ ಕೈದಿ ಸಾವು

Crime Logo (2)
Published on

ದಾವಣಗೆರೆ: ನಗರದ ಜಿಲ್ಲಾ ಕಾರಾಗೃಹದ ವಿಚಾರಣಾಧೀನ ಕೈದಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬೇಸಿಗೆ ರಾಮಚಂದ್ರಾಪುರ ಗ್ರಾಮದ ದೇವರಾಜ್ (49) ಮೃತ ವ್ಯಕ್ತಿ.

ಕೆಟಿಜೆ ನಗರದಲ್ಲಿನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವರ್ಷದಿಂದ ಜೈಲಿನಲ್ಲಿದ್ದ. ಉಸಿರಾಟ ಸಮಸ್ಯೆ, ಅಸ್ತಮಾ, ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದ ಎನ್ನಲಾಗಿದೆ.

ಚಿಕಿತ್ಸೆಗಾಗಿ ಬುಧವಾರ ಸಂಜೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಕಾರಾಗೃಹದ ಅಧೀಕ್ಷಕ ಕರ್ಣ ಬಿ.ಕ್ಷತ್ರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net