

ದಾವಣಗೆರೆ : ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದಿಂದ ಮಾಜಿ ರಾಷ್ಟ್ರಪತಿ ದಿ. ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸ್ಮರಣೆ ಕಾರ್ಯಕ್ರಮ ನಗರದ ಗೌರಮ್ಮ ಡಿ.ಎಂ. ಹನಗೋಡಿಮಠ ನರ್ಸರಿ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆಯಿತು. ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು. ದೇಶ ಕಂಡ ಅದ್ಭುತ ಪ್ರತಿಭೆ, ‘ದಿ ಮಿಸೈಲ್ ಮ್ಯಾನ್’ ಎಂದೇ ಖ್ಯಾತರಾಗಿ, ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿ, 140 ಕೋಟಿ ಭಾರತೀಯರ ಮನ ಗೆದ್ದಿದ್ದರು ಎಂದು ನುಡಿ ನಮನ ಸಲ್ಲಿಸಲಾಯಿತು. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಡಾ. ನಜೀರ್ ಅಹ್ಮದ್, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿಕಟಪೂರ್ವ ನಿರ್ದೇಶಕ ಗೌತಮ್ ಜೈನ್, ಟಿಪ್ಪು ಸುಲ್ತಾನ್, ಇಕ್ಬಾಲ್ ಅಹ್ಮದ್, ಶಮೀರ್ ಆಲಂ ಖಾನ್ ಇದ್ದರು.