

ದಾವಣಗೆರೆ : ವಿಶ್ವ ಮಧ್ವ ಮಹಾ ಪರಿಷತ್ತಿನ ದಾವಣಗೆರೆ ಕೇಂದ್ರದ ರಜತ ಮಹೋತ್ಸವ ಅಂಗವಾಗಿ ಪಂಡಿತ ವಿದ್ಯಾಧೀಶ ಆಚಾರ್ಯ ಗುತ್ತಲ ಅವರಿಂದ ಮಹಾಭಾರತ ಪ್ರವಚನ ಕಾರ್ಯಕ್ರಮ ಶುಕ್ರವಾರದಿಂದ ಭಾನುವಾರದ ವರೆಗೆ ನಗರದ ಪಿ.ಜೆ. ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯಲಿದೆ. ಸಂಜೆ 6 ರಿಂದ 7.30 ರ ವರೆಗೆ ಪ್ರವಚನ ನಡೆಯಲಿದೆ. ಶನಿವಾರ ರಾತ್ರಿ 7.30 ಕ್ಕೆ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾನುವಾರ ಬೆಳಗ್ಗೆ 9 ಗಂಟೆಯಿಂದ ಮನ್ಯುಸೂಕ್ತ ಮತ್ತು ವೇದವ್ಯಾಸ ಮಂತ್ರದ ಹೋಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 11 ರಿಂದ 12.30 ರ ವರೆಗೆ ಪ್ರವಚನದ ಮಂಗಳ ಇರುತ್ತದೆ. ಭಕ್ತರು ಪಾಲ್ಗೊಳ್ಳುವಂತೆ ಕೋರಲಾಗಿದೆ.