

ದಾವಣಗೆರೆ : ಶ್ರೀ ಪುರಂದರ ದಾಸರ ಆರಾಧನೆ ಹಾಗೂ ನಂದಕಿಶೋರ ಭಜನಾ ಮಂಡಳಿಯ 27ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಲಾಯರ್ ರಸ್ತೆಯ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ವೇದ ಪಂಡಿತ ಮಧುಸೂದನಾಚಾರ್ಯ ಆಯನೂರು ಅವರಿಂದ ಪ್ರವಚನ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಹಮಿಕೊಳ್ಳಲಾಗಿದೆ. ಬುಧವಾರ ಬೆಳಗ್ಗೆ 6 ಗಂಟೆಯಿಂದ ಸುಪ್ರಭಾತ, ಯಾಯಿವಾರ, ಪ್ರವಚನ ಮಂಗಳ ಮತ್ತು ತೀರ್ಥ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಮಕ್ಕಳಿಗೆ ದಾಸರ ಪದಗಳ ಗಾಯನ, ಸ್ತೋತ್ರ ಪಠಣ, ಹರಪನಹಳ್ಳಿ ಭೀಮವ್ವ ಅವರ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.