ಪವರ್ ಲಿಫ್ಟಿಂಗ್ ಸ್ಪರ್ಧೆ ವಿಜೇತರಿಗೆ ಗೌರವ

dvg-power-lifting_20250706011251107.jpg
Published on

ದಾವಣಗೆರೆ : ಗ್ರೂಪ್ ಆಫ್ ಐರನ್ ಗೇಮ್ಸ್ ವತಿಯಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪುರುಷರ ಹಾಗೂ ಮಹಿಳೆಯರ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪದಕ ವಿಜೇತ ಸ್ಪರ್ಧಿಗಳಿಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಗೃಹ ಕಚೇರಿಯಲ್ಲಿ ಶನಿವಾರ ಗೌರವಿಸಿದರು.  ದಾವಣಗೆರೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ನಡೆದ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.  ಪುರುಷರ ವಿಭಾಗದಲ್ಲಿ ಸುಜೀಲ್ ಅಹ್ಮದ್, ಮಹಿಳೆಯರ ವಿಭಾಗದಲ್ಲಿ ಸಹನಾ ಅವರು ಪ್ರಶಸ್ತಿ ಪಡೆದಿದ್ದಾರೆ ಎಂದು ಆಯೋಜಕ ಎಚ್. ದಾದಾಪೀರ್ ಮಾಹಿತಿ ನೀಡಿದರು.  ಗ್ರೂಪ್ ಆಫ್ ಐರನ್ ಗೇಮ್ಸ್ ಸಂಸ್ಥಾಪಕರಾದ ಕೆ.ಎನ್. ಶೈಲಜಾ, ಎಂ. ಮಹೇಶ್ವರಯ್ಯ, ಷಣ್ಮುಖ್, ಎನ್. ಸುರೇಶ್ ಕುಮಾರ್, ಡಿ.ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net