‘ಸೆಪ್ಟೆಂಬರ್ 10’ ಚಲನಚಿತ್ರದ ಪೋಸ್ಟರ್ ಬಿಡುಗಡೆ

dvg-poster.jpg
Published on

ದಾವಣಗೆರೆ : ಬೆಂಗಳೂರಿನ ಶ್ರೀದೇವಿ ಪಿಕ್ಚರ್ಸ್‌ನ ‘ಸೆಪ್ಟೆಂಬರ್-10’ ಚಲನಚಿತ್ರದ ಪೋಸ್ಟರ್‌ನ್ನು ನಗರದ ಎಂಸಿಸಿ ‘ಎ’ ಬ್ಲಾಕ್‌ನಲ್ಲಿರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ಗುರುವಾರ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಬಿಡುಗಡೆ ಮಾಡಿದರು.  ನಂತರ ಮಾತನಾಡಿದ ಶಾಮನೂರು ಶಿವಶಂಕರಪ್ಪ, ಸಾಯಿಪ್ರಕಾಶ್ ಅವರು ಸಾಯಿಬಾಬಾ ಅವರ ಭಕ್ತರಾಗಿದ್ದರಿಂದ ಇಂದು ತಾವು ನಿರ್ದೇಶಿಸಿರುವ, ಹೊಸಬರು ನಾಯಕರಾಗಿರುವ ‘ಸೆಪ್ಟೆಂಬರ್-10’ ಚಲನಚಿತ್ರದ ಪೋಸ್ಟರ್‌ನ್ನು ಸಾಯಿಬಾಬಾ ಅವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಿದ್ದಾರೆ ಎಂದರು.  ಕನ್ನಡ ನಾಡಿನ ಜನತೆ ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಿಗೆ ತೆರಳಿ ವೀಕ್ಷಿಸಿದರೆ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗಲಿದೆ ಎಂದು ತಿಳಿಸಿದರು.  ನಿರ್ಮಾಪಕರಾದ ಉಮೇಶ್ ಬಣಕಾರ್, ನಟ ದೊಂಬರ ಕೃಷ್ಣ ಸುರೇಶ್, ಚಲನಚಿತ್ರದ ನಿರ್ದೇಶಕ ಓಂ ಪ್ರಕಾಶ್, ಸಂಕಲನಕಾರ ಈಶ್ವರ್, ಚಲನಚಿತ್ರ ನಟರಾದ ಶಿವಕುಮಾರ್, ಶ್ರೀರಕ್ಷಾ, ಗಣೇಶರಾವ್, ರವೀಂದ್ರನಾಥ್, ನವನೀತ, ನಾಯಕನಟ ಜಯಸಿಂಹ, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಎ. ನಾಗರಾಜ್, ಸುರಭಿ ಶಿವಮೂರ್ತಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net