ಮಿಸ್ ಪಾರ್ವತಿ ಪೋಸ್ಟರ್ ಬಿಡುಗಡೆ

dvg-miss-parvathi.jpg
Published on

ದಾವಣಗೆರೆ :  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಯ ಮಹಿಳಾ ಸಿಬ್ಬಂದಿಗೆ ‘ಮಿಸ್. ಪಾರ್ವತಿ’ ಹೆಸರಿನಲ್ಲಿ ಕಲೋತ್ಸವ ಹಾಗೂ ಕ್ರೀಡೋತ್ಸವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ನಗರದ ಜೆಜೆಎಂ ಕಾಲೇಜಿನ ಸಭಾಂಗಣದಲ್ಲಿ ಶನಿವಾರ, ಕಾರ್ಯಕ್ರಮದ ಬಗ್ಗೆ ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ನಂತರ ‘ಮಿಸ್ ಪಾರ್ವತಿ’ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.  ಮಿಸ್. ಪಾರ್ವತಿ - ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿಗಾಗಿ ಆಯೋಜಿಸಲಾಗಿದೆ. ಇದು ಮಹಿಳೆಯರಲ್ಲಿ ಅಡಗಿರುವ ಕಲೆಯನ್ನು ಗುರುತಿಸುವ ಪ್ರಯತ್ನವಾಗಿದೆ. ಮಹಿಳೆಯರ ಪ್ರತಿಭೆ, ಬರವಣಿಗೆ, ವಾಕ್ಚಾತುರ್ಯ ಹೊರತರಲು ಇದೊಂದು ಅದ್ಭುತವಾದ ವೇದಿಕೆ ಎಂದರು.  ಕಲೋತ್ಸವ ಹೆಸರಿನಲ್ಲಿ ಅಡುಗೆ, ಸಂಗೀತ, ರಂಗೋಲಿ ಹಾಕುವ ಸ್ಪರ್ಧೆಗಳು ಮತ್ತು ಕ್ರೀಡೋತ್ಸವ ಹೆಸರಿನಲ್ಲಿ ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ಆಯೋಜಿಸಲಾಗಿದೆ. ಮಹಿಳಾ ದಿನವನ್ನು ಒಂದು ದಿನಕ್ಕೆ ಸೀಮಿತಗೊಳಿಸದೇ, ಇಡೀ ತಿಂಗಳು ಆಚರಿಸೋಣ, ಹೆಣ್ಣಾಗಿ ಹುಟ್ಟುವುದೇ ಒಂದು ಅದೃಷ್ಟ. ಅಂತಹ ಸುಂದರವಾದ ಹೆಣ್ತನವನ್ನು ಸಂಭ್ರಮಿಸೋಣ. ಮನೆಯಲ್ಲಿ ದೀಪ ಬೆಳಗುವುದರ ಜತೆಗೆ ಮನೆಯವರ ಬದುಕನ್ನೂ ಬೆಳಗಿಸಬೇಕು ಎಂದು ಹೇಳಿದರು.  ಬಾಪೂಜಿ ಆಡಳಿತ ಮಂಡಳಿಯ ಸದಸ್ಯ ಸಂಪನ್ನ ಮುತಾಲಿಕ್, ಬಿಐಇಟಿ ಪ್ರಾಚಾರ್ಯ ಬಿ.ಎಚ್. ಅರವಿಂದ್, ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಸೇರಿದಂತೆ ಸಂಸ್ಥೆಯ ಮುಖ್ಯಸ್ಥರು ಇದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net