ದಾವಣಗೆರೆ ಅಂಚೆ ವಿಭಾಗಕ್ಕೆ ವಲಯ ಮಟ್ಟದ 15 ಪ್ರಶಸ್ತಿ

anche.jpg
Published on

ದಾವಣಗೆರೆ :  ದಾವಣಗೆರೆ ಅಂಚೆ ವಿಭಾಗವು 2023-24ರ ಸಾಲಿನಲ್ಲಿ ವಲಯ ಮಟ್ಟದ 15 ಪ್ರಶಸ್ತಿಗಳನ್ನು ಪಡೆದಿದೆ.  ಮಂಗಳೂರಿನಲ್ಲಿ ಕಳೆದ ವಾರ ದಕ್ಷಿಣ ಕರ್ನಾಟಕ ವಲಯದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಲ್ಲಿ ದಾವಣಗೆರೆ ವಿಭಾಗಕ್ಕೆ ವಿವಿಧ ಪ್ರಶಸ್ತಿಗಳನ್ನು ನೀಡಲಾಯಿತು.  ಪ್ರಶಸ್ತಿಗೆ ಭಾಜನರಾದವರನ್ನು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವಿಭಾಗದ ಅಂಚೆ ಅಧೀಕ್ಷಕ ಚಂದ್ರಶೇಖರ ಮಾತನಾಡಿ, ಈ ವರ್ಷ ನಮ್ಮ ವಿಭಾಗವು ಉತ್ತಮ ಸಾಧನೆ ಮಾಡಿದೆ. ಮುಂದಿನ ಹಣಕಾಸು ವರ್ಷದಲ್ಲಿ ಅದರ ಸಂಖ್ಯೆ ದುಪ್ಪಟ್ಟು ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.  ಸ್ವಾತಂತ್ರ್ಯೋತ್ಸವದ ಆಚರಣೆಯ ಪ್ರಯುಕ್ತ ವಿಶೇಷ ಅಂಚೆ ಖಾತೆ ತೆರೆಯುವ ಅಭಿಯಾನವನ್ನು ಇಲಾಖೆ ಹಮ್ಮಿಕೊಂಡಿದ್ದು ಅದನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.  ವಿಭಾಗದ ಸ್ಥಾನಿಕ ಸಹಾಯಕ ಅಂಚೆ ಅಧೀಕ್ಷಕ ಜೆ.ಎಸ್. ಗುರುಪ್ರಸಾದ್, ದಾವಣಗೆರೆ 1ನೇ ಉಪ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಕೆ.ಎಂ. ನರೇಂದ್ರ ನಾಯ್ಕ್, ದಾವಣಗೆರೆ ಪ್ರಧಾನ ಅಂಚೆ ಕಚೇರಿಯ ಪ್ರಧಾನ ಅಂಚೆಪಾಲಕ ಎಂ. ಓಂಕಾರಮೂರ್ತಿ, ಚನ್ನಗಿರಿ ಉಪ ವಿಭಾಗದ ಅಂಚೆ ನಿರೀಕ್ಷಕ ಜೆ.ಡಿ. ಸ್ವಾಮಿ, ದಾವಣಗೆರೆ ಎರಡನೇ ಉಪ ವಿಭಾಗದ ಅಂಚೆ ನಿರೀಕ್ಷಕ ವಿ. ಅಶ್ವಥ್, ದಾವಣಗೆರೆ ಐಪಿಪಿಬಿ ಮ್ಯಾನೇಜರ್ ಕೆ.ಎಚ್. ಶ್ರೀನಿವಾಸ್, ಎ.ಎನ್. ವೆಂಕಟರಾಮಯ್ಯ, ಮಾರುಕಟ್ಟೆ ನಿರ್ವಾಹಕ ಬಿ. ಸಂತೋಷ್, ಪ್ರಧಾನ ಅಂಚೆ ಕಚೇರಿಯ ಸಿಬ್ಬಂದಿ, ವಿಭಾಗೀಯ ಸಹಾಯಕರು, ನಗರದ ಇತರ ಅಂಚೆ ಕಚೇರಿಗಳ ಅಂಚೆ ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net