25 ರಂದು ಅಂಚೆ ಮನರಂಜನಾ ಕೂಟದಿಂದ ಕನ್ನಡ ರಾಜ್ಯೊತ್ಸವ

post.jpg
Published on

ದಾವಣಗೆರೆ : ಭಾರತೀಯ ಅಂಚೆ ಇಲಾಖೆಯ ಅಂಚೆ ಮನರಂಜನಾ ಕೂಟದಿಂದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ನ. 25 ರಂದು ಮಧ್ಯಾಹ್ನ 3.30ಕ್ಕೆ ನಗರದ ಪ್ರಧಾನ ಅಂಚೆ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
 ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕಿ ಸರಸ್ವತಿ ಡಿ.ಜೋಶಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಅಂಚೆ ಅಧೀಕ್ಷಕ ಚಂದ್ರಶೇಖರ್, ಉಪ ಅಂಚೆ ಅಧೀಕ್ಷಕರಾದ ಜೆ.ಎಸ್.ಗುರುಪ್ರಸಾದ್, ಕೆ.ಎಂ. ನರೇಂದ್ರ ನಾಯಕ್, ಅಂಚೆ ನಿರೀಕ್ಷಕ ವಿ. ಅಶ್ವಥ್, ವಿಶೇಷ ಆಹ್ವಾನಿತರಾಗಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಪಾಲ್ಗೊಳ್ಳುವರು.
 ಅಂಚೆ ಇಲಾಖೆಯ ಸಿಬ್ಬಂದಿಯಿಂದ  ನಾಡಗೀತೆ ಸೇರಿ ಕನ್ನಡ ಗೀತಗಾಯನ, ವಿವಿಧ ಸ್ಪರ್ಧೆಗಳು ಹಾಗೂ ಮನರಂಜನೆ ನಡೆಯಲಿದೆ. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಇಲಾಖೆಯ ಅಧಿಕಾರಿಗಳು ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net