ಹೋರಾಟಗಾರರ ಭಾವವಿತ್ರಕ್ಕೆ ಧಕ್ಕೆ

Davanagere, Portrait, Photo, Action, Appeal,
Published on


ದಾವಣಗೆರೆ: ಕಳೆದ 15 ವರ್ಷಗಳಿಂದ ನಗರದ ಡಾ.ಮೋದಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಸಲುವಾಗಿ ನಾಡಿನ ಹಿರಿಯ ಹೋರಾಟಗಾರರು ಹಾಗೂ ದೇಶ ಭಕ್ತರ ಭಾವಚಿತ್ರಗಳಿರುವ ಫ್ಲೆಕ್ಸ್‌ನ್ನು ಹಾಕಿದೆ.

ಕೆಲ ಕಿಡಿಗೇಡಿಗಳು ಇದರಲ್ಲಿರುವ ಕನ್ನಡ ಪರ ಹೋರಾಟಗಾರ, ಕನ್ನಡಕ್ಕಾಗಿ ಪ್ರಾಣವನನೇ ಬಲಿದಾನ ಮಾಡಿದ ಮು.ಗೋವಿಂದರಾಜ್ ಭಾವಚಿತ್ರ ಹರಿದು ಹಾಕಿದ್ದಾರೆ. ಈ ಕೃತ್ಯ ಎಸಗಿದ ನಾಡದ್ರೋಹಿಗಳನ್ನು ಕೂಡಲೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ಒತ್ತಾಯಿಸಿದರು.

ಟ್ರಾಫಿಕ್ ಉಲ್ಲಂಘನೆ ಪರಿಶೀಲಿಸಲು ಸಿಗ್ನಲ್‌ಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ದುಷ್ಕೃತ್ಯ ಎಸಗಿದವರ ಚಲನ-ವಲನ ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಬೇಕೆಂದು ನಗರ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಕೆ.ಜಿ.ಬಸವರಾಜ್, ಸಂತೋಷ್, ಮಹೇಶ್ವರಪ್ಪ, ಮಂಜುಳ ಮಹಾಂತೇಶ್, ಸಾಕಮ್ಮ, ರಫೀಕ್, ಜಬಿವುಲ್ಲಾ, ಆಯುಬ್ ಪರಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net