ಗುಂಪುಗಳ ನಡುವೆ ಮಾರಾಮಾರಿ

Crime Logo (2)
Published on

ದಾವಣಗೆರೆ: ರಾಜಕೀಯ ವೈಷಮ್ಯ ಹಿನ್ನೆಲೆಯಲ್ಲಿ ಮಂಗಳವಾರ ಎರಡು ಗುಂಪುಗಳ ನಡುವೆ ತಾಲೂಕಿನ ಕಾಟೇಹಳ್ಳಿ ಗ್ರಾಮದಲ್ಲಿ ಮಾರಾಮಾರಿ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಗ್ರಾಮದಲ್ಲಿ ಹೈಮಾಸ್ಟ್ ದೀಪವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬ ನೆಪದಲ್ಲಿ ಜಿಪಂ ಮಾಜಿ ಸದಸ್ಯ ಹಾಲೇಶಪ್ಪ ಹಾಗೂ ಹೆಬ್ಬಾಳ್ ಗ್ರಾಪಂ ಉಪಾಧ್ಯಕ್ಷ ಶಿವಮೂರ್ತಿ ಬೆಂಬಲಿಗರ ನಡುವಿನ ಮಾತಿನ ಚಕಮಕಿ ಜಗಳಕ್ಕೆ ತಿರುಗಿದೆ.

ಎರಡೂ ಗುಂಪಿನವರು ಮಚ್ಚುಗಳನ್ನು ಹಿಡಿದು ಹಲ್ಲೆ ಮಾಡಿದ್ದಾರೆ. ಶಿವಮೂರ್ತಿ, ಶೇಖರಪ್ಪ ಹಾಗೂ ಮತ್ತೊಂದು ಗುಂಪಿನ ಶೇಖರಪ್ಪ ಮತ್ತು ಆತನ ಮಗ ನಿತಿನ್ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net