ಕಾಂಗ್ರೆಸ್ ಪಾಳಯದಲ್ಲಿ ಖುಷಿಯ ಅಲೆ

dvg-prabha-mallikarjun-05.jpg
Published on

 ರಮೇಶ ಜಹಗೀರದಾರ್ ದಾವಣಗೆರೆ
 ಇಪ್ಪತ್ತೈದು ವರ್ಷಗಳ ನಂತರ ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಗೆದ್ದು ಬೀಗಿರುವ ಕಾಂಗ್ರೆಸ್ ಪಾಳಯದಲ್ಲಿ ಖುಷಿಯ ಅಲೆ ವ್ಯಾಪಿಸಿದೆ. ಅಷ್ಟು ವರ್ಷಗಳಿಂದ ಕಟ್ಟಿ ಬೆಳೆಸಿದ ಭದ್ರ ಕೋಟೆ ನುಚ್ಚು ನೂರಾಗಿದ್ದರಿಂದ ಬಿಜೆಪಿ ವಲಯದಲ್ಲಿ ಮಂಕು ಕವಿದಿದೆ.
 ಜಿಲ್ಲೆಯಲ್ಲಿ 6 ಜನ ಆಯ್ಕೆಯಾಗಿರುವುದರಿಂದ ಕಾಂಗ್ರೆಸ್‌ಗೆ ಆನೆಬಲ ಬಂದಂತಾಗಿದೆ. ಇದು ಸಹಜವಾಗಿಯೆ ಆ ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
 ಬಿಜೆಪಿಯಲ್ಲಿ ತದ್ವಿರುದ್ಧ ಸ್ಥಿತಿ ಇದೆ. ಒಂದು ಕಾಲದಲ್ಲಿ ಐದಾರು ಜನ ಶಾಸಕರ ಜತೆಗೆ ಸಚಿವರು ಹಾಗೂ ಸಂಸದರಿದ್ದರು. ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಲೋಕಸಭೆಯ ವರೆಗೂ ಕಮಲ ಪಡೆ ಅಧಿಕಾರದಲ್ಲಿತ್ತು. ಈಗ ಒಬ್ಬರು ಶಾಸಕರನ್ನು (ಹರಿಹರ) ಬಿಟ್ಟರೆ ಹೇಳಿಕೊಳ್ಳಲು ಬೇರೆ ಯಾರೂ ಇಲ್ಲದಂತಾಗಿದೆ.
 ನಮ್ಮವರೊಬ್ಬರು ಲೋಕಸಭೆಯಲ್ಲಿದ್ದಾರೆ ಎಂಬ ಧೈರ್ಯವಿತ್ತು. ಕೈಯಲ್ಲಿದ್ದ ಸ್ಥಾನವನ್ನು ಕಳೆದುಕೊಂಡೆವಲ್ಲ ಎಂಬ ಬೇಸರ, ಒಂದು ರೀತಿಯಲ್ಲಿ ರಾಜಕೀಯ ತಬ್ಬಲಿತನ ಬಿಜೆಪಿ ಕಾರ್ಯಕರ್ತರನ್ನು ಕಾಡುತ್ತಿದೆ, ಅವರಿಗೆ ಧ್ವನಿ ಇಲ್ಲದಂತಾಗಿದೆ.
 ಚುನಾವಣೆಯ ಸೋಲಿನ ಬಗ್ಗೆ ಕಮಲ ಪಾಳಯದಲ್ಲಿ ಕಾರ್ಯಕರ್ತರ ಮಧ್ಯೆ ಚರ್ಚೆ, ಏಕೆ ಹೀಗಾಯಿತು ಎನ್ನುವ ಆತ್ಮಾವಲೋಕನಕ್ಕೆ ಈ ಫಲಿತಾಂಶ ದಾರಿ ಮಾಡಿಕೊಟ್ಟಿದೆ. ದಾವಣಗೆರೆ ಉತ್ತರವನ್ನು ಬಿಟ್ಟರೆ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದ್ದರ ಬಗ್ಗೆ ವಿಶ್ಲೇಷಣೆ ನಡೆಯುತ್ತಿವೆ.
 ...
 (ಬಾಕ್ಸ್)
 ರಾಜಕೀಯ ಭವಿಷ್ಯದ ಚಿಂತೆ
 ರಾಜಕಾರಣದಲ್ಲಿ ಬೆಳೆಯಬೇಕು ಎಂದು ಕನಸು ಕಾಣುತ್ತಿರುವ ಬಿಜೆಪಿ ಕಾರ್ಯಕರ್ತರಲ್ಲಿ ಅವರ ರಾಜಕೀಯ ಭವಿಷ್ಯದ ಬಗ್ಗೆ ಆತಂಕ ಶುರುವಾಗಿದೆ.
 ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಸ್ಪರ್ಧಿಸಬೇಕು ಎಂದುಕೊಂಡ ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಲ್ಲುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ನಮ್ಮವರೊಬ್ಬರು ಅಧಿಕಾರದಲ್ಲಿದ್ದರೆ ಧೈರ್ಯವಿರುತ್ತದೆ, ಈಗ ಯಾರ ಬಳಿಗೆ ಹೋಗಬೇಕು ಎಂದು ಕೇಳುವಂತಾಗಿದೆ.
 ...
 (ಬಾಕ್ಸ್)
 ಅಭಿಮಾನಿಗಳ ಸಂತಸ
 ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೆ ಹರಿದು ಬರುತ್ತಿದೆ.
 ಪ್ರಭಾ ಅವರ ನಿವಾಸಕ್ಕೆ ಬೆಳಗ್ಗೆಯಿಂದಲೆ ಜನರು ಬರತೊಡಗಿದರು. ಅವರನ್ನು ಸನ್ಮಾನಿಸಿ ಅಭಿಮಾನ ಮೆರೆದರು. ಬಾಪೂಜಿ ವಿದ್ಯಾಸಂಸ್ಥೆ ಹಾಗೂ ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಆಗಮಿಸಿ ನೂತನ ಸಂಸದೆಯನ್ನು ಗೌರವಿಸಿದರು.
 ಎಸ್‌ಎಸ್‌ಎಂ ಬಳಗದವರು ಕೊಡದಗುಡ್ಡ ವೀರಭದ್ರೇಶ್ವರ ದೇವಸ್ಥಾನದಲ್ಲಿ 101 ತೆಂಗಿನ ಕಾಯಿಗಳನ್ನು ಒಡೆಯುವ ಮೂಲಕ ಹರಕೆ ತೀರಿಸಿದರು.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net