ಮಾದಿಗ ಸಮಾಜಕ್ಕೆ ರಾಜಕೀಯ ಶಕ್ತಿ ತುಂಬಲು ಆಗ್ರಹ

IMG-20250715-WA0031.jpg
Published on

ದಾವಣಗೆರೆ :  ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾದಿಗ ಸಮಾಜಕ್ಕೆ ರಾಜಕೀಯ ಶಕ್ತಿ ತುಂಬಬೇಕು ಎಂದು ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಎಚ್.ಸಿ. ಗುಡ್ಡಪ್ಪ ಆಗ್ರಹಿಸಿದರು.  ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಸಚಿವ ಸ್ಥಾನ ಮತ್ತು ಮಾಜಿ ಸಚಿವ ಎಚ್. ಆಂಜನೇಯ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿಕೊಂಡು ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕೆಂದು ಮನವಿ ಮಾಡಿದರು.  ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ 101ಜಾತಿಗಳಲ್ಲಿ ಮಾದಿಗ ಸಮಾಜವು ರಾಜಕೀಯ, ಶಿಕ್ಷಣ, ಉದ್ಯೋಗ, ಆರ್ಥಿಕ, ವ್ಯಾಪಾರ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದಿದೆ. 36 ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಮಾದಿಗ ಸಮಾಜದ ಶಾಸಕರು ಆಯ್ಕೆಯಾಗಿರುವುದು ಕೇವಲ ಐದು ಜನ ಮಾತ್ರ. 1996 ರಲ್ಲಿ ಮಾದಿಗ ಸಮಾಜದ ಶಾಸಕರ ಸಂಖ್ಯೆ 26 ಇತ್ತು ಎಂದು ತಿಳಿಸಿದರು.  ಮಾದಿಗ ದಂಡೋರ ಹಿರಿಯ ಉಪಾಧ್ಯಕ್ಷ ಎಚ್. ಚಿದಾನಂದಪ್ಪ, ಮುಖಂಡರಾದ ಜಿ.ಎಚ್. ಮಹೇಶ್, ಯಶೋದರ, ಜಿ.ಎಚ್. ತಮ್ಮಣ್ಣ, ಎ.ಕೆ. ನಾಗೇಂದ್ರಪ್ಪ, ಈಚಗಟ್ಟ ಕೆಂಚಪ್ಪ ಸುದ್ದಿಗೋಷ್ಠಿಯಲ್ಲಿದ್ದರು.  ...    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net