

ವಿಜಯವಾಣಿ ಸುದ್ದಿಜಾಲ ದಾವಣಗೆರೆ ಕಾಮದಹನ ಮತ್ತು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಭಯಮುಕ್ತ ವಾತಾವರಣ ಸೃಷ್ಟಿ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ 2 ತಂಡಗಳಲ್ಲಿ ಪೊಲೀಸ್ ಪಥ ಸಂಚಲನ ನಡೆಸಲಾಯಿತು. ನಗರದ ಮಟ್ಟಿಕಲ್ಲು ಪ್ರದೇಶದಿಂದ ಆರಂಭಿಸಿ, ವೆಂಕಟೇಶ್ವರ ವೃತ್ತ, ಅರಳಿಮರ ವೃತ್ತ, ಹಳೇಬೆತೂರು ರಸ್ತೆ, ಮದೀನ ಆಟೋ ಸ್ಟ್ಯಾಂಡ್ ಹಾಸಬಾವಿ ವೃತ್ತ, ಎಂ.ಜಿ. ರಸ್ತೆ ಕ್ರಾಸ್, ಬಸವರಾಜ ಪೇಟೆ, ಹಗೆದಿಬ್ಬ ವೃತ್ತ, ದುರ್ಗಾಂಬಿಕಾ ದೇವಸ್ಥಾನ, ಹೊಂಡದ ವೃತ್ತದ ಬಳಿ ಮುಕ್ತಾಯವಾಯಿತು. ಶಿವಪ್ಪಯ್ಯ ವೃತ್ತ, ಕೆಟಿಜೆ ನಗರ 8ನೇ ಕ್ರಾಸ್, ವಿದ್ಯಾರ್ಥಿ ಭವನ, ಸಿಜಿ ಆಸ್ಪತ್ರೆ ರಸ್ತೆ, ಗುಂಡಿ ವೃತ್ತ, ಡೆಂಟಲ್ ಕಾಲೇಜ್ ರೋಡ್, ಬಾಯ್ಸ್ ಹಾಸ್ಟೆಲ್ ರೋಡ್, ವೆಂಕಟೇಶ್ವರ ದೇವಾಸ್ಥಾನ, ಸ್ವಿಮ್ಮಿಂಗ್ ಪೂಲ್ ರಸ್ತೆ , ರೆಡ್ಡಿ ಬಿಲ್ಡಿಂಗ್, ವಿನೋಬಾ ನಗರ 2ನೇ ಮುಖ್ಯ ರಸ್ತೆಯಲ್ಲಿ ಸಾಗಿ ಪಿಬಿ ರಸ್ತೆಗೆ ಮುಕ್ತಾಯವಾಯಿತು. ಪಥ ಸಂಚಲನದಲ್ಲಿ ಹೆಚ್ಚುವರಿ ಎಸ್ಪಿ ಜಿ. ಮಂಜುನಾಥ ನೇತೃತ್ವದಲ್ಲಿ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಭೀಮರಾವ್, ನಗರದ ಪೊಲೀಸ್ ಅಧಿಕಾರಿಗಳಾದ ಅಶ್ವಿನ್ ಕುಮಾರ, ನಂಜುಂಡಸ್ವಾಮಿ, ಸುನೀಲ್ ಕುಮಾರ, ಶಿಲ್ಪಾ, ಮಲ್ಲಮ್ಮ ಚೌಬೆ, ನೂರ್ ಅಹಮದ್ ಹಾಗೂ ಇತರೆ