ಇಬ್ಬರು ಅಂತಾರಾಜ್ಯ ಆರೋಪಿಗಳ ಬಂಧನ

IMG-20241017-WA0235.jpg
Published on

ದಾವಣಗೆರೆ : ಮನೆಗಳ್ಳತನ ಪ್ರಕರಣ ಸಂಬಂಧ ನಗರದ ಪೊಲೀಸರು ಇಬ್ಬರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಿದ್ದಾರೆ.  ಒಡಿಶಾದ ಸಂಬಲ್‌ಪುರ ಜಿಲ್ಲೆಯ ಅತಾವೀರ ಗ್ರಾಮದ ನಂದಿನಿ ಅಲಿಯಾಸ್ ನಂದಿನಿ ಸಿಂಗ್ ಮತ್ತು ರುವೀ ಅಲಿಯಾಸ್ ರುಬೀ ಜಾನಿ ಬಂಧಿತ ಆರೋಪಿಗಳು. ಅವರಿಂದ 4.29 ಲಕ್ಷ ರೂ. ಮೌಲ್ಯದ 57 ಗ್ರಾಂ ಬಂಗಾರದ ಆಭರಣ ಹಾಗೂ 535 ಗ್ರಾಂ ಬೆಳ್ಳಿಯ ಆಭರಣ ಮತ್ತು 91 ಸಾವಿರ ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.  ಆರೋಪಿಗಳ ಪತ್ತೆಗೆ ಹೆಚ್ಚುವರಿ ಎಸ್ಪಿ ವಿಜಯ್ ಕುಮಾರ್ ಎಂ ಸಂತೋಷ್ ಮತ್ತು ಜಿ. ಮಂಜುನಾಥ, ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಗಾಂಧಿನಗರ ವೃತ್ತದ ಪೊಲೀಸ್ ಇನ್‌ಸ್ಪೆಕ್ಟರ್ ಬಾಲಚಂದ್ರ ನಾಯಕ್ ಮಾರ್ಗದರ್ಶನದಲ್ಲಿ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಸಚಿನ್ ಬಿರಾದಾರ್, ಪುಷ್ಪಲತಾ ಅವರನ್ನು ಒಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net