ಪ್ಲಾಸ್ಟಿಕ್ ಮುಕ್ತ ನಗರಕ್ಕೆ ಕೈಜೋಡಿಸಲು ಮನವಿ

abhiyana.jpg
Published on

ದಾವಣಗೆರೆ : ದಾವಣಗೆರೆಯನ್ನು ಸ್ವಚ್ಛ, ಸುಸ್ಥಿರ ಹಾಗೂ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಪರಿವರ್ತಿಸಲು ಕೈಜೋಡಿಸುವಂತೆ ನಗರದ ಉದ್ದಿಮೆದಾರರಿಗೆ ಮಹಾನಗರ ಪಾಲಿಕೆ ವತಿಯಿಂದ ಶನಿವಾರ ಮನವಿ ಮಾಡಿಕೊಳ್ಳಲಾಯಿತು.
 ತಮ್ಮ ಉದ್ದಿಮೆಯಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನೀಷೇಧಗೊಳಿಸಿ, ಗ್ರಾಹಕರಿಗೂ ಜಾಗೃತಿ ಮೂಡಿಸಿ ಪ್ಲಾಸ್ಟಿಕ್ ಕವರ್ ಬದಲು, ಬಟ್ಟೆ ಹಾಗೂ ಮರುಬಳಕೆಯ ಪೇಪರ್‌ನಿಂದ ತಯಾರಿಸಿದ ಚೀಲವನ್ನು ಬಳಸುವಂತೆ ತಿಳಿಸಲಾಯಿತು.
 ಪಾಲಿಕೆಯ 24ನೇ ವಾರ್ಡಿನ ಸದಸ್ಯ ಪ್ರಸನ್ನ ಕುಮಾರ್, 22ನೇ ವಾರ್ಡಿನ ಸದಸ್ಯ ಶಿವಾನಂದ, ಆರೋಗ್ಯ ಅಧಿಕಾರಿ ನಿಖಿಲ್ ಮತ್ತು ಇತರರು ಇದ್ದರು. 24ನೇ ವಾರ್ಡಿನ ಅನೇಕ ಮಳಿಗೆಗಳು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು, ಅವರಿಗೆ ಪ್ರಸಂಶನಾ ಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net