ಪಿಂಚಣಿ ಸೌಲಭ್ಯ ನೀಡಲು ಆಗ್ರಹ

dvg-rashtriya-sangharsha-samiti-12.jpg
Published on

ದಾವಣಗೆರೆ : ಪಿಂಚಣಿ ಸೌಲಭ್ಯ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಷ್ಟ್ರೀಯ ಸಂಘರ್ಷ ಸಮಿತಿ ನೇತೃತ್ವದಲ್ಲಿ ಇಪಿಎಸ್ 95 ಪಿಂಚಣಿದಾರರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
 ಇಪಿಎಫ್ ಕಚೇರಿ ಮುಂದೆ ಸೇರಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ನಂತರ ಇಪಿಎಫ್ ಅಧಿಕಾರಿಗೆ ಮನವಿ ಸಲ್ಲಿಸಿದರು.
 ಕನಿಷ್ಠ ಪಿಂಚಣಿ 7500 ರೂ. ಜತೆಗೆ ತುಟ್ಟಿಭತ್ಯೆ, ವೈದ್ಯಕೀಯ ಸೌಲಭ್ಯ ನೀಡಬೇಕು. ವಿಧವೆಯರಿಗೆ ಪೂರ್ಣ ಪಿಂಚಣಿ ವೇತನ ಹಾಗೂ ಪಿಂಚಣಿ ವಂಚಿತರಿಗೆ ಕನಿಷ್ಠ 5 ಸಾವಿರ ರೂ. ನೀಡುವಂತೆ ಆಗ್ರಹಿಸಿದರು.
 ಸಂಘದ ಜಿಲ್ಲಾಧ್ಯಕ್ಷ ಕೆ.ಎಂ. ಮರುಳಸಿದ್ದಯ್ಯ, ಮುಖಂಡರಾದ ಪುಟಗನಾಳ್ ಮಂಜುನಾಥ್, ಗಂಗಾಧರ್, ಎಂ. ಶಾಂತಪ್ಪ, ಮಲ್ಲಿಕಾರ್ಜುನ ತಂಗಡಗಿ, ಡಿ.ಎಚ್. ಶೆಟ್ಟರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net