ಲಿಂ. ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿ ಜಯಂತ್ಯುತ್ಸವ

dvg-panchamasali.jpg
Published on

ದಾವಣಗೆರೆ : ಶ್ರೀ ಜಗದ್ಗುರು ಲಿಂಗೈಕ್ಯ ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರ 87ನೇ ಜಯಂತ್ಯುತ್ಸವ ಪ್ರಯುಕ್ತ ಹರಿಹರದ ಪಂಚಮಸಾಲಿ ಪೀಠದಲ್ಲಿ ಇತ್ತೀಚೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

ಅಲಗೂರು ಬಬಲೇಶ್ವರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಜಗದ್ಗುರು ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಮನಗೂಳಿ ಹಿರೇಮಠದ ಶ್ರೀ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಲಿಂಗೈಕ್ಯ ಜಗದ್ಗುರುಗಳ ಕರ್ತೃಗದ್ದುಗೆಯಲ್ಲಿ ಜಗದ್ಗುರುಗಳ ನೂತನ ಪಂಚಲೋಹದ ಉತ್ಸವ ಮೂರ್ತಿಯ ಮಹಾರುದ್ರಾಭಿಷೇಕ ಮತ್ತು ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಪಲ್ಲಕ್ಕಿ ಉತ್ಸವದ ನಂತರ ಧರ್ಮ ಸಭೆಯಲ್ಲಿ ಶ್ರೀ ಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಆಡಳಿತ ಅಧಿಕಾರಿ ಡಾ. ರಾಜಕುಮಾರ್, ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಮಾಲಿಪಾಟೀಲ್, ಪ್ರಧಾನ ಕಾರ್ಯದರ್ಶಿ ಪರಮೇಶ್ ಪಟ್ಟಣಶೆಟ್ಟಿ, ಮಹಿಳಾ ಘಟಕದ ಉಪಾಧ್ಯಕ್ಷೆ ವಸಂತ ಬಿ. ಹುಲ್ಲತ್ತಿ, ಕಾರ್ಯಾಧ್ಯಕ್ಷೆ ರಶ್ಮಿ ನಾಗರಾಜ್ ಕುಂಕೋದ್, ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ಮಾಗಡಿ ಮಂಜುನಾಥ್ ಇದ್ದರು.

ಸಮಾಜದ ಹಿರಿಯರಾದ ಹೊಳೆಸಿರಿಗೇರಿ ನಾಗನಗೌಡ್ರು, ಶ್ರೀ ಪೀಠದ ದಾಸೋಹ ಸಮಿತಿ ಅಧ್ಯಕ್ಷ ಜಿ. ಷಣ್ಮುಖಪ್ಪ, ಮೇಷ್ಟ್ರು, ಕಾರ್ಯದರ್ಶಿ ಎನ್. ಶಿವಾನಂದಪ್ಪ, ಉಪಾಧ್ಯಕ್ಷ ರವಿಕುಮಾರ್ ಪೂಜಾರ್ ಬಾತಿ, ಎಸ್. ಚನ್ನಬಸಪ್ಪ, ವಿಜಯನಗರ ಜಿಲ್ಲಾಧ್ಯಕ್ಷ ಪ್ರಕಾಶ್ ಪಾಟೀಲ್, ಹರಿಹರ ತಾಲೂಕು ಅಧ್ಯಕ್ಷ ಗುಳದಳ್ಳಿ ಶೇಖರಪ್ಪ, ಮನಗೂಳಿ ಗ್ರಾಮದ ಭಕ್ತರು, ಸಮಾಜದವರು ಪಾಲ್ಗೊಂಡಿದ್ದರು.

ದಾವಣಗೆರೆ ಮಹಾನಗರ ಪಾಲಿಕೆಯ ನೂತನ ಉಪ ಮೇಯರ್ ಸೋಗಿ ಶಾಂತಕುಮಾರ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net