ಜಾಗತಿಕ ಸಾಧನೆಗೆ ತಂತ್ರಜ್ಞಾನ ಪೂರಕ

dvg-orientation.jpg
Published on

ದಾವಣಗೆರೆ  : ಆಧುನಿಕ ತಂತ್ರಜ್ಞಾನದ ಸಾಧನ ಸವಲತ್ತುಗಳು ಜಾಗತಿಕ ಮಟ್ಟದ ಸಾಧನೆಗಳನ್ನು ಮಾಡಲು ಪೂರಕವಾಗಿದ್ದು ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.  ನಗರದ ಬಾಪೂಜಿ ಇನ್ಸ್‌ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಶನ್‌ನಲ್ಲಿ ಗುರುವಾರ, ನೂತನ ಬಿಕಾಂ ವಿದ್ಯಾರ್ಥಿಗಳ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ‘ಗುರಿ ನಿಶ್ಚಯ ಹಾಗೂ ಯಶಸ್ಸು’ ಎಂಬ ವಿಷಯವಾಗಿ ಮಾತನಾಡಿದರು.  ಪಠ್ಯ ವಿಷಯಗಳೊಂದಿಗೆ ಸಮಕಾಲೀನ ವಸ್ತು ಸ್ಥಿತಿಯ ಅರಿವು, ಯೋಜನೆಗಳ ರೂಪಿಸುವಿಕೆಗೆ ಅತ್ಯವಶ್ಯಕವಾಗಿದೆ. ಇದನ್ನು ಪಡೆದುಕೊಳ್ಳಲು ಆಧುನಿಕ ತಂತ್ರಜ್ಞಾನದ ಸಂಪರ್ಕ ಸಾಧನಗಳು ಅನುಕೂಲಕರವಾಗಿವೆ. ಉದ್ಯಮಶೀಲತೆಯ ಕನಸನ್ನು ವಿದ್ಯಾರ್ಥಿ ದೆಸೆಯಿಂದಲೇ ಕಾಣುತ್ತಾ ಓದಿನೊಂದಿಗೆ ಅದರ ಸಾಕಾರಕ್ಕೂ ಯೋಚನೆ ಮತ್ತು ಯೋಜನೆಗಳನ್ನು ರೂಪಿಸಿಕೊಳ್ಳಬೇಕು, ಇದಕ್ಕಾಗಿ ಆತ್ಮವಿಶ್ವಾಸವನ್ನು ಮೊದಲು ಹೊಂದಬೇಕು ಎಂದು ಸಲಹೆ ನೀಡಿದರು.  ಪ್ರಾಧ್ಯಾಪಕರಾದ ಲತಾ ಒ.ಎಚ್, ಶ್ವೇತಾ ಬಿ.ವಿ, ಮಂಜುಳಾ ಎ.ಎನ್, ಜ್ಞಾನೇಶ್ವರ ಆರ್.ಎಸ್, ಮಂಜುನಾಥ ಬಿ.ಬಿ, ಪ್ರಜ್ವಲ್ ಎ.ಆರ್ ಇದ್ದರು. ಅಕ್ಷತಾ ಎಂ.ವಿ ನಿರೂಪಿಸಿದರು. ಅತಿಥಿಗಳ ಪರಿಚಯವನ್ನು ದೀಪಾ ಎಚ್.ಎಸ್ ಮಾಡಿದರು. ಸ್ನೇಹಾ ವಿ.ಆರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net