ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

notebook.jpg
Published on

ದಾವಣಗೆರೆ : ಭಗತ್‌ಸಿಂಗ್ ಯುವ ಬ್ರಿಗೇಡ್ ಫೌಂಡೇಶನ್ ವತಿಯಿಂದ ಆವರಗೆರೆ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.

ಶಾಲೆಯ ಅಂದಾಜು 250 ವಿದ್ಯಾರ್ಥಿಗಳಿಗೆ ತಲಾ ಅರ್ಧ ಡಜನ್ ನೋಟ್‌ಬುಕ್ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ಸಮಾಜಸೇವಕ ಶ್ರೀನಿವಾಸ ದಾಸಕರಿಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದ ಮೂಲಕ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಬೇಕು. ಆಗ ನಿಮ್ಮಿಂದ ಬಡವರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಬಿಜೆಪಿ ಮುಖಂಡರಾದ ರಾಜು ನೀಲಗುಂದ, ಗುರುರಾಜ್, ಬ್ರಿಗೇಡ್ ಅಧ್ಯಕ್ಷ ಸಚಿನ್ ಕುಮಾರ್, ವಿನಯ್ ಚಿಗಟೇರಿ, ಕಿಶನ್, ಶ್ಯಾಮಸುಂದರ, ಅಜಯ್, ನಂದೀಶ್, ಕೆ.ಎನ್. ಸನತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net