ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ

DVG-KUWJ-12_20240913004606537.jpg
Published on

ದಾವಣಗೆರೆ  :  ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಪತ್ರಿಕಾ ದಿನಾಚರಣೆ, ಮಾಧ್ಯಮ ಮಾಣಿಕ್ಯ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ ಸುದ್ದಿಗೋಷ್ಠಿಯಲ್ಲಿ  ತಿಳಿಸಿದರು.  ಶುಕ್ರವಾರ ಮಧ್ಯಾಹ್ನ 3ಕ್ಕೆ  ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸುವರು. ಶಿವಮೊಗ್ಗ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಸಂಚಾಲಕಿ  ಅನಸೂಯಾ ಜಿ ಸಾನ್ನಿಧ್ಯ ವಹಿಸುವರು.  ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಸಚಿವ  ಮಲ್ಲಿಕಾರ್ಜುನ್ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕಾರ್ಯದರ್ಶಿ ಜಿ.ಸಿ.ಲೋಕೇಶ, ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ. ರವಿ , ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಕೆ ವಾರ್ತಾಧಿಕಾರಿ ಬಿ. ಧನಂಜಯಪ್ಪ, ನಿಂಗಪ್ಪ ಚಾವಡಿ ಭಾಗವಹಿಸುವರು ಎಂದರು.  ಗೌರವಾರ್ಪಣೆ:  ದಾವಣಗೆರೆ ವಿವಿ ಬಿಎಸ್‌ಸಿ ಪಠ್ಯಕ್ಕೆ ‘ಉತ್ತರೆ ಮಳೆ’ ಕವಿತೆ - ಪತ್ರಕರ್ತ ಬಿ.ಎನ್. ಮಲ್ಲೇಶ್, ಗೌರವ ಡಾಕ್ಟರೇಟ್ ಪುರಸ್ಕೃತ  ವ್ಯಂಗ್ಯಚಿತ್ರಕಾರ -ಎಚ್.ಬಿ. ಮಂಜುನಾಥ್, ವರದಿಗಾರರ ಕೂಟದ  ಅಧ್ಯಕ್ಷ- ನಾಗರಾಜ್ ಎಸ್. ಬಡದಾಳ್, ಚನ್ನಗಿರಿ ತಾಲೂಕು ಸಂಘದ ನೂತನ ಅಧ್ಯಕ್ಷ -ವಿ. ಲಿಂಗರಾಜು.  ಮಾಧ್ಯಮ ಮಾಣಿಕ್ಯ ಪ್ರಶಸ್ತಿ ಪುರಸ್ಕೃತರು:  ಮಂಜುನಾಥ್ ಪಿ. ಕಾಡಜ್ಜಿ, ಬಸವರಾಜ್ ದೊಡ್ಮನಿ, ಛಾಯಾಗ್ರಾಹಕ ವಿಜಯ ಕುಮಾರ್ ಜಾಧವ್, ಡಿಸೈನರ್ ಕೆ.ಜೆ. ದಾನೇಶ್, ಪ್ರೂಫ್‌ರೀಡರ್ ಎಚ್. ನಿಂಗಪ್ಪ, ಜಾಹೀರಾತು ವಿಭಾಗದಿಂದ  ಎಚ್.ಜಿ. ರುದ್ರೇಶಿ, ಮುದ್ರಕ ಎಸ್.ಎನ್. ಮಹೇಶ್, ವಿತರಕ ಟಿ.ಕೆ. ದಿನೇಶ್‌ಬಾಬು, ವಿಜಯವಾಣಿಯ ಚನ್ನಗಿರಿ ತಾಲೂಕು ವರದಿಗಾರ  ಟಿ.ಎನ್.ಜಗದೀಶ್, ಹರಿಹರದ ಇನಾಯತ್ ಉಲ್ಲಾ, ಹೊನ್ನಾಳಿಯ ಎಚ್.ಸಿ. ಮೃತ್ಯುಂಜಯ ಪಾಟೀಲ್, ಜಗಳೂರಿನ ಅಣಬೂರು ಮಠದ ಕೊಟ್ರೇಶ್, ನ್ಯಾಮತಿಯ ಎಂ.ಎಸ್. ಶಾಸ್ತ್ರಿ ಹೊಳಿಮಠ      ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಎಸ್‌ಬಡದಾಳ ಹಾಗೂ ಎನ್.ವಿ. ಬದರಿನಾಥ್, ಎ. ಫಕೃದ್ಧೀನ್, ಜೆ.ಎಸ್. ವೀರೇಶ್, ಆರ್.ಎಸ್. ತಿಪ್ಪೇಸ್ವಾಮಿ, ಸಿ. ವೇದಮೂರ್ತಿ  ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net