

ದಾವಣಗೆರೆ : ಪ್ರಸ್ತುತ (2025-26) ಶೈಕ್ಷಣಿಕ ಸಾಲಿನಲ್ಲಿ ನಡೆಸಲಾದ ನೀಟ್ ಪರೀಕ್ಷೆಯಲ್ಲಿ ದಿ ಟೀಮ್ ಅಕಾಡೆಮಿಯ ವಿದ್ಯಾರ್ಥಿ ಸುದರ್ಶನ ಜಿ. 642 ನೇ ರ‌್ಯಾಂಕ್ ಪಡೆದಿದ್ದಾರೆ. 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಜಿ. ಸುದರ್ಶನ್ (592), ಹರೀಶ್ ಯಾದವ್ (565), ಸುಜಯ್ ಬಿ.ಎಚ್ (561), ಅಮೋಘವರ್ಷ ಎಂ.ಎಸ್. (559), ಪ್ರೀತಮ್ ಜಿ.ಸಿ (550) ಅಂಕ ಗಳಿಸಿದ್ದಾರೆ. ಪ್ರತ್ಯೇಕ ವರ್ಗ ಶ್ರೇಣಿಯಲ್ಲಿ ಕೆ.ಕೆ. ವನಜಾಕ್ಷಿ (528), ಅನುರಾಗ್ ಎನ್.ಯು (482) ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ದಿ ಟೀಮ್ ಅಕಾಡೆಮಿಯ ಅಧ್ಯಕ್ಷ ಮಂಜಪ್ಪ ಕೆ.ಎಂ, ಕಾರ್ಯದರ್ಶಿ ಎಸ್‌ವಿವಿ ಆರ್ ಭೂಷಣಮ್, ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.