ಸಾರ್ವಜನಿಕ ಸ್ಥಳಗಳಿಗೆ ಜೀವಂತ ವ್ಯಕ್ತಿಗಳ ಹೆಸರು ತೆರವಿಗೆ ಆಗ್ರಹ

HARIHARA-BJP-BP-HARISH-EX-MLA-4_20251019200942815.jpg
Published on

ದಾವಣಗೆರೆ : ಸಾರ್ವಜನಿಕ ಸ್ಥಳ ಮತ್ತು ಸರ್ಕಾರಿ ಕಚೇರಿಗಳಿಗೆ ಬದುಕಿರುವ ವ್ಯಕ್ತಿಗಳ ಹೆಸರು ಇಡಬಾರದು ಎಂದು ನ್ಯಾಯಾಲಯದ ಆದೇಶವಿದೆ. ಈ ನಿಯಮವನ್ನು ದಾವಣಗೆರೆಯಲ್ಲಿ ಉಲ್ಲಂಘಿಸಲಾಗಿದೆ. ಜಿಲ್ಲಾಡಳಿತ ಇದನ್ನು ಸರಿಪಡಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಹೇಳಿದರು.  ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಹೆಸರುಗಳನ್ನು ಸಾರ್ವಜನಿಕ ಸ್ಥಳ ಮತ್ತು ಸರ್ಕಾರಿ ಕಚೇರಿಗಳಿಂದ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.  ಇದೇ ಕಾನೂನು ಹೇಳಿ ಈ ಹಿಂದೆ ಚನ್ನಗಿರಿಯಲ್ಲಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪಪ ಅವರ ಹೆಸರನ್ನು ಜಿಲ್ಲಾಡಳಿತ ತೆರವುಗೊಳಿಸಿತ್ತು. ಅದೇ ನಿಯಮ ದಾವಣಗೆರೆಯಲ್ಲೂ ಅನ್ವಯವಾಗಲಿ ಎಂದು ಒತ್ತಾಯಿಸಿದರು.  ಗಣೇಶೋತ್ಸವ ವೇಳೆ ಡಿಜೆ ನಿಷೇಧ, ದೀಪಾವಳಿಯಲ್ಲಿ ಪಟಾಕಿಗಳ ಸದ್ದು ಇಂತಿಷ್ಟು ಡೆಸಿಬಲ್ ಮೀರಬಾರದು ಎಂಬ ಕಾನೂನು ಹೇಳುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರು, ಸಾರ್ವಜನಿಕ ಸ್ಥಳಗಳಿಗೆ ಜೀವಂತ ವ್ಯಕ್ತಿಗಳ ಹೆಸರು ಇಟ್ಟಿರುವ ಬಗ್ಗೆಯೂ ಅದೇ ರೀತಿಯ ಕ್ರಮ ಕೈಗೊಳ್ಳಲಿ. ‘ಸೇವಕರಂತೆ ಕೆಲಸ ಮಾಡಬೇಡಿ’ ಎಂದು ಸಲಹೆ ನೀಡಿದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net