ಬಸವಾಪಟ್ಟಣದಲ್ಲಿ ನಡ್ಡಾ ಭರ್ಜರಿ ರೋಡ್ ಶೋ

IMG-20230429-WA0130.jpg
Published on

ದಾವಣಗೆರೆ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸವಾಪಟ್ಟಣದಲ್ಲಿ ಶನಿವಾರ ಭರ್ಜರಿ ರೋಡ್ ಶೋ ನಡೆಸಿದರು.
 ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದಿಂದ ಮೆರವಣಿಗೆಗೆ ಚಾಲನೆ ದೊರೆಯಿತು. ಪುಷ್ಪಾಲಂಕೃತ ತೆರೆದ ವಾಹನದಲ್ಲಿ ನಡ್ಡಾಗೆ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಪ್ರೊ.ಲಿಂಗಣ್ಣ, ಅಭ್ಯರ್ಥಿ ಬಸವರಾಜ ನಾಯ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ ಹನಗವಾಡಿ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಮುಖಂಡರಾದ ದೇವೇಂದ್ರಪ್ಪ, ಜಿ.ಎಸ್. ಅನಿತ್ ಕುಮಾರ್, ರಾಜಶೇಖರ್, ಅನಿಲ್ ಕತ್ತಲಗೆರೆ ಸಾಥ್ ನೀಡಿದರು.
 ಸುಮಾರು 2 ಕಿ.ಮೀ. ದೂರ ಸಾಗಿದ ರೋಡ್ ಶೋನಲ್ಲಿ ನಡ್ಡಾ ಜನರತ್ತ ಕೈಬೀಸಿ ವಂದಿಸಿದರು, ಕಾರ್ಯಕರ್ತರು, ಅಭಿಮಾನಿಗಳತ್ತ ಹೂ ಚೆಲ್ಲಿದರು.
 ಹಲಗೆಗಳ ಸದ್ದಿಗೆ ಯುವಕರು ಕುಣಿದರು. ಸಾಂಪ್ರದಾಯಿಕ ಉಡುಪು ಧರಿಸಿದ್ದ ಲಂಬಾಣಿ ಮಹಿಳೆಯರು ಜತೆಗೆ ಹೆಜ್ಜೆ ಹಾಕಿದರು. ಮೋದಿ, ನಡ್ಡಾ ಕಟೌಟ್ಗಳು, ಪಕ್ಷದ ಧ್ವಜಗಳು ರಾರಾಜಿಸಿದವು.ಮಕ್ಕಳು ಮೋದಿ ಮುಖವಾಡ ಹಾಕಿಕೊಂಡು ಓಡಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net