ಆತ್ಮವಿಶ್ವಾಸ ತುಂಬುವ ಶಕ್ತಿ ಸಂಗೀತಕ್ಕಿದೆ

dvg-sangeeta-30.jpg
Published on

ದಾವಣಗೆರೆ : ನೊಂದ ಮನಸ್ಸಿಗೆ ಆತ್ಮವಿಶ್ವಾಸ ತುಂಬುವ ಶಕ್ತಿ ಸಂಗೀತಕ್ಕಿದೆ ಎಂದು ಎ.ಕೆ. ಫೌಂಡೇಶನ್ ಸಂಸ್ಥಾಪಕ ಕೆ.ಬಿ. ಕೊಟ್ರೇಶ್ ಹೇಳಿದರು.
 ಎ.ಕೆ. ಫೌಂಡೇಶನ್, ಕರುನಾಡು ಕನ್ನಡ ಸೇನೆ ಸಹಯೋಗದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಲ್ಲಿ ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕಲಾ ಸಂಗಮ 2024’ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಸಂಗೀತವು ಮನಸ್ಸಿಗೆ ಮುದ ನೀಡಿ ಚೈತನ್ಯ ತುಂಬುತ್ತದೆ. ನಮ್ಮ ನಾಡು, ನುಡಿ, ಸಂಸ್ಕೃತಿ, ಪರಂಪರೆ ಬೆಳೆದು ಬಂದ ರೀತಿ, ಮಹನೀಯರು ನಾಡನ್ನು ಕಟ್ಟಿ ಬೆಳೆಸಿದ ಶ್ರಮ ತಿಳಿಸುವ ಮಾರ್ಗವೇ ಸುಗಮ ಸಂಗೀತ ಎಂದು ತಿಳಿಸಿದರು.
 ನಿವೃತ್ತ ಡಿಡಿಪಿಐ ಕೆ.ಬಿ.ರಾಮಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳು ಪಠ್ಯದ ಜತೆಗೆ ಸಂಗೀತ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದರು. ಪ್ರದೀಪ್, ಕನ್ನಡಪರ ಹೋರಾಟಗಾರ ಕೆ.ಟಿ. ಗೋಪಾಲಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net