ಮುರುಘಾ ಶರಣರಿಂದ ಆನ್‌ಲೈನ್ ಪ್ರವಚನ

MURUGHASHARANARU NEW NEW
Published on

ದಾವಣಗೆರೆ: ನಗರದ ವಿರಕ್ತ ಮಠದಲ್ಲಿ ಪ್ರತಿ ಬಾರಿ ನಡೆಯುತ್ತಿದ್ದ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮವನ್ನು ಕರೊನಾ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ. ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಜು.21ರಿಂದ ಆಗಸ್ಟ್ 18ರವರೆಗೆ ನಿತ್ಯ ಸಂಜೆ 6-30ರಿಂದ 7.15ರವರೆಗೆ ‘ಬೌದ್ಧಿಕ ಯಾನ’ ಪ್ರವಚನ ನೀಡುವರು.

ಡಾ.ಶಿವಮೂರ್ತಿ ಮುರುಘಾ ಶರಣರು-ಫೇಸ್‌ಬುಕ್ ಹಾಗೂ ಶ್ರೀ ಮುರುಘಾ ಮಠ ಚಿತ್ರದುರ್ಗ ಯೂಟ್ಯೂಬ್ ತಾಣದಲ್ಲಿ ಭಕ್ತರು ನೇರ ಪ್ರಸಾರ ವೀಕ್ಷಿಸುವಂತೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net