ಹೊಗಳಿಕೆ, ತೆಗಳಿಕೆ ಆಶೀರ್ವಾದವೆಂದು ಭಾವಿಸುವೆ

prabha.jpg
Published on

ದಾವಣಗೆರೆ : ಕೇಂದ್ರ ಗೃಹ ಸಚಿವ ಅಮಿತ್ ಷಾ ಹಿರಿಯರಿದ್ದಾರೆ, ಅವರು ನನ್ನ ಕಾರ್ಯವೈಖರಿ ಮೆಚ್ಚಿ ಹೊಗಳಿರಬಹುದು, ಅದನ್ನು ಆಶೀರ್ವಾದವೆಂದು ಭಾವಿಸುವೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿದರು.  ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಪ್ರತಿನಿಧಿಯಾಗಿ ನಾನು ನನ್ನ ಕೆಲಸ ಮಾಡುತ್ತಿರುವೆ. ಹೊಗಳಿಕೆ, ತೆಗಳಿಕೆ ಏನೇ ಇದ್ದರೂ ಆಶೀರ್ವಾದ ಎಂದುಕೊಳ್ಳುವುದಾಗಿ ತಿಳಿಸಿದರು.  ಭದ್ರಾ ಬಲದಂಡೆ ನಾಲೆಯಿಂದ ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ನೀರನ್ನು ಪೂರೈಸುವ ಕಾಮಗಾರಿಯಿಂದ ವಿವಾದ ಸೃಷ್ಟಿಯಾಗಿದೆ. ಇದಕ್ಕೆ ಒಳ್ಳೆಯ ಪರಿಹಾರ ಹುಡುಕಬೇಕಿದೆ. ಭದ್ರಾ ಅಚ್ಚುಕಟ್ಟಿನ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ರೈತರು ಸಂಕಷ್ಟದಲ್ಲಿದ್ದಾರೆ. ಈ ವಿಷಯದ ಬಗ್ಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net