ಮೋದಿ ರ್ಯಾಲಿಗೆ ಜಿಲ್ಲೆಯಿಂದ ಲಕ್ಷ ಜನ ನಿರೀಕ್ಷೆ; ಸಿದ್ದರಾಜ ಕಲಕೋಟಿ

Published on

ಹಾವೇರಿ: ದಾವಣಗೆರೆಯ ಜಿಎಂ ಐಟಿ ಮಹಾವಿದ್ಯಾಲಯದ ಪಕ್ಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾ.25ರಂದು ಜರುಗಲಿರುವ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಮಹಾ ಸಂಗಮ ರ್ಯಾಲಿಯಲ್ಲಿ ಜಿಲ್ಲೆಯಿಂದ 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.
ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಂದ ತಲಾ 15 ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ. 600ಕ್ಕೂ ಅಧಿಕ ಬಸ್, 1,200 ಟೆಂಪೋ, ದ್ವಿಚಕ್ರ ವಾಹನ, ಟ್ರಾೃಕ್ಟರ್, ಮತ್ತಿತರ ವಾಹನಗಳ ಮೂಲಕ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net