ಲಿಂಗಾಯತ ಸಚಿವರು ರಾಜೀನಾಮೆ ನೀಡಲು ಆಗ್ರಹ

DVG_shivaganga_20250416223621200.jpg
Published on

ದಾವಣಗೆರೆ  : ಜಾತಿ ಗಣತಿ ಸಂಬಂಧ ಧ್ವನಿ ಎತ್ತದ ಲಿಂಗಾಯತ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಎಂದು, ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ ಶಿವಗಂಗಾ, ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಕ್ಕಲಿಗ ಸಮಾಜಕ್ಕೆ ಅನ್ಯಾಯ ಆಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಸಮಾಜದ ಶಾಸಕರ ಜತೆ ಚರ್ಚೆ ನಡೆಸಿದರು. ಆದರೆ ಲಿಂಗಾಯತ ಸಮುದಾಯದ ಸಚಿವರು ಮಾತ್ರ ಅದರ ಗೋಜಿಗೆ ಹೋಗಿಲ್ಲ, ಧ್ವನಿ ಎತ್ತಿಲ್ಲ ಎಂದು ತಿಳಿಸಿದರು.  ಈ ಕುರಿತು ಚರ್ಚಿಸಲು ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರವಾಣಿ ಕರೆ ಮಾಡಿದರೆ ಪ್ರತಿಕ್ರಿಯಿಸಲಿಲ್ಲ. ಏಳು ಜನ ಸಚಿವರೂ ಅಸಮರ್ಥರಿದ್ದಾರೆ. ಸ್ವಾರ್ಥಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ. ಅವರು ಕೂಡಲೇ ರಾಜೀನಾಮೇ ನೀಡಬೇಕು ಎಂದು ಒತ್ತಾಯಿಸಿದರು.  ನಮ್ಮ ಕ್ಷೇತ್ರದಲ್ಲಿ ಸಮೀಕ್ಷೆ ನಡೆಸುತ್ತಿದ್ದೇನೆ. ಇನ್ನೆರಡು, ಮೂರು ದಿನಗಳಲ್ಲಿ ವರದಿ ನೀಡುತ್ತೇನೆ. ಜಾತಿಗಣತಿ ಬಗ್ಗೆ ನಾಳೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಿ, ಆದರೆ ಬಿಡುಗಡೆ ಮಾಡುವುದು ಬೇಡ. ಎಲ್ಲರ ಸಮೀಕ್ಷೆ ಮುಗಿದ ನಂತರ ಬಿಡುಗಡೆ ಮಾಡಲಿ ಎಂದರು.  ಕ್ಷೇತ್ರದಲ್ಲಿ ಉತ್ತರ ಕೊಡುವವರು ನಾವು. ಈ ವಿಚಾರವಾಗಿ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ನನ್ನ ಬೆಂಬಲವಿದೆ. ಅವರ ಮಾತಿನಲ್ಲಿ ಸತ್ಯವಿರುತ್ತದೆ. ಒಕ್ಕಲಿಗರು, ಲಿಂಗಾಯತರು ಅಷ್ಟೇ ಅಲ್ಲ, ಅನ್ಯಾಯಕ್ಕೆ ಒಳಗಾದ ಸಮಾಜಗಳು ಸೇರಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.  ...  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net