ಸಿಎಂ ಗಾದಿಗೆ ಹಿರಿತನದ ಪ್ರಶ್ನೆ ಬಾರದು

DVG_Basavaraj-shivaganga-CHN-mla.jpg
Published on

ದಾವಣಗೆರೆ : ಮುಖ್ಯಮಂತ್ರಿ ಗಾದಿಗೆ ಹಿರಿತನದ ಪ್ರಶ್ನೆ ಬರುವುದಿಲ್ಲ. ಕಾರ್ಯಕ್ಷಮತೆಯೂ ಮಾನದಂಡ ಆಗುತ್ತದೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.  ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹಿರಿತನದ ಆಧಾರದ ಮೇಲೆ ಸಿಎಂ ಸ್ಥಾನ ಕೇಳುವವರಿಗೆ ಟಾಂಗ್ ನೀಡಿದರು.  ಕುಮಾರಸ್ವಾಮಿ ಮೊದಲ ಬಾರಿಗೆ ರಾಜ್ಯದ ಸಿಎಂ ಆದರು. ಸಂಸದರಾಗಿದ್ದ ಸದಾನಂದಗೌಡರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದರು. ಅಲ್ಲಿ ಹಿರಿತನದ ಪ್ರಶ್ನೆ ಬಾರದೆ ಕಾರ್ಯಕ್ಷಮತೆ ಮುಖ್ಯವಾಗುತ್ತದೆ ಎಂದು ಉಲ್ಲೇಖಿಸಿದರು.  ಡಿ.ಕೆ.ಶಿವಕುಮಾರ್ ಅವರು 136 ಸೀಟ್ ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಲೋಕಸಭೆಯಲ್ಲಿ 9 ಸ್ಥಾನ ಗೆಲ್ಲಿಸಿದ್ದಾರೆ. ಒಂದು ವೇಳೆ ಅವಕಾಶ ಬಂದರೆ ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ತಿಳಿಸಿದರು.  ಮುಖ್ಯಮಂತ್ರಿ ಆಗುವ ಅರ್ಹತೆ ನನಗೂ ಸೇರಿ ರಾಜ್ಯದ 136 ಶಾಸಕರಿಗೂ ಇದೆ. ಈ ವಿಷಯದಲ್ಲಿ ಹಿರಿಯರು ಬೇರೆ ಶಾಸಕರಿಗೆ ಮಾದರಿಯಾಗಿರಬೇಕು. ಆ ರೀತಿ ಮಾತನಾಡುವುದು ಸರಿಯಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net