ಕೆಂಡ ತುಳಿದು ಹರಕೆ ತೀರಿಸಿದ ಸಚಿವ ಮಲ್ಲಿಕಾರ್ಜುನ್

minister_20240423012841272.jpg
Published on

ದಾವಣಗೆರೆ : ನಗರದ ಹಳೇಪೇಟೆ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಅಂಗವಾಗಿ ಗುಗ್ಗಳ ಮತ್ತು ಕೆಂಡ ತುಳಿಯುವ ಕಾರ್ಯಕ್ರಮ ಸೋಮವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.
 ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಪ್ರತಿ ವರ್ಷದಂತೆ ಈ ಬಾರಿಯೂ ದೇಗುಲದ ಆವರಣದಲ್ಲಿ ಕೆಂಡ ತುಳಿಯುವ ಮೂಲಕ ಹರಕೆ ತೀರಿಸಿದರು.
 ಬೆಳಗ್ಗೆ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಮತ್ತು ಮಕ್ಕಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಸಚಿವ ಮಲ್ಲಿಕಾರ್ಜುನ್, ಸ್ವಾಮಿಯ ದರ್ಶನ ಪಡೆದರು. ಪುತ್ರ ಸಮರ್ಥ, ಪುತ್ರಿ ಶ್ರೇಷ್ಠಾ ಕೂಡಾ ಕೆಂಡ ತುಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net