ಸಿ.ಟಿ. ರವಿ ಹೇಳಿಕೆಗೆ ಸಚಿವ, ಸಂಸದೆ ಖಂಡನೆ

SS-Mallikarjun-dvg-south.jpg
Published on

ದಾವಣಗೆರೆ : ಬೆಳಗಾವಿಯ ಸುವರ್ಣ ಸೌಧದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ನೀಡಿರುವ ಹೇಳಿಕೆಯನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಖಂಡಿಸಿದ್ದಾರೆ.  ಮಹಿಳೆಯರನ್ನು ಗೌರವದಿಂದ ಕಾಣಬೇಕು. ನೀವು ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ್ದು ಸರಿಯೆ?. ನೀವು ಮಹಿಳೆಯರ ಬಗ್ಗೆ ಈ ರೀತಿಯ ಮಾತುಗಳನ್ನು ಆಡಬಾರದು ಎಂದು ತಿಳಿಸಿದ್ದಾರೆ. ಸಿ.ಟಿ. ರವಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.  

 * ಆರೋಪ ಸತ್ಯಕ್ಕೆ ದೂರ  ಪ್ರತಿ ಬಾರಿ ನಡೆಯುವ ಅಧಿವೇಶನ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿ ಎನ್.ಡಿ.ಎ ಒಕ್ಕೂಟದವರು ಮಾತನಾಡುತ್ತಾರೆ. ಈ ಬಾರಿ ಇವರ ವರ್ತನೆ ಅತಿರೇಕಕ್ಕೆ ಹೋಗಿದೆ. ರಾಹುಲ್ ಗಾಂಧಿ ಅವರ ಮೇಲಿನ ಮಹಿಳಾ ಸಂಸದೆಯೊಬ್ಬರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.  ಜನರ ರಕ್ಷಣೆಗಾಗಿ ಆಯ್ಕೆಯಾದ ಸಂಸದೆಯೊಬ್ಬರ ಸುಳ್ಳು ಹೇಳಿಕೆಯಿಂದ ರಾಹುಲ್ ಗಾಂಧಿ ಅವರ ಮೇಲೆ ಎಫ್‌ಐಆರ್ ದಾಖಲಿಸುತ್ತಿರುವುದು ಖಂಡನಿಯ. ಇಂಡಿಯಾ ಒಕ್ಕೂಟದ ಹೋರಾಟವನ್ನು ತಡೆಯಲು ಪ್ರಧಾನಿ, ಕೇಂದ್ರದ ಗೃಹ ಸಚಿವರು ಹಾಗೂ ಎನ್.ಡಿ.ಎ ಒಕ್ಕೂಟದವರು ಮಾಡಿರುವ ಷಡ್ಯಂತ್ರ ಇದಾಗಿದೆ ಎಂದು ಅವರು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net