ಮೋಸದಿಂದ ಗೆದ್ದು ಅಧಿಕಾರಕ್ಕೆ ಬಂದಿದ್ದ ಬಿಜೆಪಿ

SS-Mallikarjun-dvg-south.jpg
Published on

ದಾವಣಗೆರೆ : ದಾವಣಗೆರೆ ಮಹಾನಗರ ನಡೆದುಕೊಂಡಿದ್ದೇವೆಪಾಲಿಕೆಯಲ್ಲಿ ಬಿಜೆಪಿಯವರು ಈ ಹಿಂದೆ ಮೋಸದಿಂದ ಗೆದ್ದು ಅಧಿಕಾರಕ್ಕೆ ಬಂದಿದ್ದರು. ನಾವು ಪ್ರಜಾಪ್ರಭುತ್ವದ ಆಶಯದಂತೆ ನಡೆದುಕೊಂಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.  ಪಾಲಿಕೆಯ ಮೇಯರ್, ಉಪ ಮೇಯರ್ ಆಯ್ಕೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ‘ಆಪರೇಷನ್ ಹಸ್ತ’ ಮಾಡಿಲ್ಲ ಎಂದು ತಿಳಿಸಿದರು.  ಬಿಜೆಪಿಯವರು ಈ ಹಿಂದೆ ಮಾಡಬಾರದ ಕೆಲಸಗಳನ್ನು ಮಾಡಿದರು. ಬಿಬಿಎಂಪಿಯಲ್ಲಿ ಮತ ಹಾಕಿದವರನ್ನು ಕರೆತಂದಿದ್ದರು. ನಾವು ಹೊರಗಿನವರನ್ನು ಕರೆತಂದು ಮತ ಹಾಕಿಸಿಲ್ಲ ಎಂದು ಹೇಳಿದರು.  ಐದು ವರ್ಷಗಳ ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗ ನಗರದಲ್ಲಿ ಅಭಿವೃದ್ಧಿ ಪರ್ವವೇ ನಡೆದಿತ್ತು. ಕಳೆದ 5 ವರ್ಷಗಳಲ್ಲಿ ಹಿನ್ನಡೆಯಾಗಿದ್ದು ಅದರ ಮರುಸ್ಥಾಪನೆ ಮಾಡಬೇಕಿದೆ. ನಮ್ಮ ಅವಧಿಯಲ್ಲಿ ಹೆಚ್ಚು ಅನುದಾನ ತಂದು ಗುಣಮಟ್ಟದ ಕಾಮಗಾರಿ ಮಾಡಿದ್ದೆವು ಎಂದು ನೆನಪಿಸಿದರು.  ಕಳೆದ 5 ವರ್ಷಗಳಲ್ಲಿ ಕಳಪೆ ಕಾಮಗಾರಿಗಳಾಗಿವೆ. ಮುಂದೆ ಅದಕ್ಕೆ ಅವಕಾಶವಾಗದ ರೀತಿಯಲ್ಲಿ ಒಳ್ಳೆಯ ಆಡಳಿತ ನೀಡಲಾಗುವುದು ಎಂದು ಭರವಸೆ ನೀಡಿದರು.  ಸ್ಮಾರ್ಟ್‌ಸಿಟಿ ಕಾಮಗಾರಿಗಳು ಸರಿಯಾಗಿ ಆಗಿಲ್ಲ. ನಗರದ ವೃತ್ತಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಮೊದಲಿಗೆ ಒಂದು ಸರ್ಕಲ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಒಳ್ಳೆಯ ಬೀದಿಗಳು, ಬೀದಿ ದೀಪ, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.  ...    (ಕೋಟ್)  ದಾವಣಗೆರೆ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ನಮ್ಮ ಪಕ್ಷದವರು ಆಯ್ಕೆಯಾಗಿದ್ದಾರೆ. ಜನರಿಗೆ ಒಳ್ಳೆಯ ಆಡಳಿತ ನೀಡಲಿದ್ದಾರೆ. ಬಿಜೆಪಿಯವರು ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಪ್ರಯತ್ನಿಸಿದರು, ಅದು ಫಲಿಸಲಿಲ್ಲ. ಅವರಿಗೆ ನಾಚಿಕೆ ಇಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ.   ಡಾ. ಶಾಮನೂರು ಶಿವಶಂಕರಪ್ಪ, ಶಾಸಕ  ...    (ಕೋಟ್)  ಸಿಎಂ ಸಿದ್ದರಾಮಯ್ಯ ಯಾವ ತಪ್ಪೂ ಮಾಡಿಲ್ಲ. ಬೇಕೆಂದೇ ಈ ರೀತಿ ಮಾಡುತ್ತಿದ್ದಾರೆ. ಎಫ್‌ಐಆರ್ ದಾಖಲಿಸಿದರೆ ನಾವು ಕಾನೂನು ಹೋರಾಟ ಮಾಡುತ್ತೇವೆ. ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ. ಮುಖ್ಯಮಂತ್ರಿಗಳು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಕೆ.ಬಿ. ಕೋಳಿವಾಡ ಹೇಳಿಕೆ ವೈಯಕ್ತಿಕವಾದುದು. ಸಿದ್ದರಾಮಯ್ಯ ಬಡವರಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದು ವಿಪಕ್ಷದವರಿಗೆ ಅದನ್ನು ಸಹಿಸಲು ಆಗುತ್ತಿಲ್ಲ.   ಎಸ್.ಎಸ್. ಮಲ್ಲಿಕಾರ್ಜುನ್, ಗಣಿ ಮತ್ತು ಭೂವಿಜ್ಞಾನ ಸಚಿವ  ...    (ಕೋಟ್)  ಹಸಿರು ದಾವಣಗೆರೆ ಪರಿಕಲ್ಪನೆಯಡಿ ನಗರದ ವಿವಿಧ ವಾಡುಗಳಲ್ಲಿ 2 ಸಾವಿರ ಗಿಡಗಳನ್ನು ನೆಡುವ ಉದ್ದೇಶವಿದೆ. ನೂತನ ಮೇಯರ್, ಉಪ ಮೇಯರ್ ಪಾರದರ್ಶಕ ಆಡಳಿತ ನೀಡಲಿ. ನಾವೆಲ್ಲ ಅವರೊಂದಿಗೆ ಇದ್ದು ಸಹಕಾರ ನೀಡುತ್ತೇವೆ.   ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಸದೆ    ...  (ಕೋಟ್)  ಇರುವ 4 ತಿಂಗಳು 20 ದಿನಗಳಲ್ಲಿ ಪಾರದರ್ಶಕ ಆಡಳಿತ ನೀಡಲಾಗುವುದು. ಮೂಲ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗುವುದು. ಸಂಸದರ ಅನುದಾನ ನೀಡುವಂತೆ ಮನವಿ ಮಾಡಲಾಗುವುದು. ಜಲಸಿರಿ ಯೋಜನೆಯ ಕಾಮಗಾರಿಗಳಿಗಾಗಿ ನಗರದ ವಿವಿಧೆಡೆ ಗುಂಡಿಗಳನ್ನು ತೆಗೆದಿದ್ದಾರೆ. ಇನ್ನೊಂದು ತಿಂಗಳಲ್ಲಿ ಅವುಗಳನ್ನು ಮುಚ್ಚಿಸಿದರೆ ಪಾಲಿಕೆ ವತಿಯಿಂದ ರಸ್ತೆಗಳಿಗೆ ಕಾಯಕಲ್ಪ ನೀಡಲಾಗುವುದು.   ಕೆ. ಚಮನ್ ಸಾಬ್, ನೂತನ ಮೇಯರ್  ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net