ಗುಣಾತ್ಮಕ ಶಿಕ್ಷಣ, ಉದ್ಯೋಗ ಭದ್ರತೆ ನೀಡಲು ಮನವಿ

dvg-deaf-and-dumb-17.jpg
Published on

ದಾವಣಗೆರೆ : ಗುಣಾತ್ಮಕ ಶಿಕ್ಷಣ, ಉದ್ಯೋಗ ಭದ್ರತೆ ಸೇರಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ನೆರವಾಗಬೇಕು ಎಂದು ಜಿಲ್ಲಾ ಕಿವುಡರ ಸಂಘದ ಸದಸ್ಯರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.
 ಜಿಲ್ಲಾ ನ್ಯಾಯಾಲಯದ ಕಚೇರಿಯಲ್ಲಿ ಸೋಮವಾರ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರಣ್ಣವರ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
 ವಿವಿಧ ಇಲಾಖೆಗಳಲ್ಲಿ ಶೇ. 5ರ ಅನುದಾನದಿಂದ ವಂಚಿತರಾಗುತ್ತಿರುವುದು ಇನ್ನಿತರ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಸಂಕಷ್ಟದಲ್ಲಿ ಇರುವವರಿಗೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಉದ್ಯೋಗಗಳನ್ನು ನೀಡಬೇಕು. ಉನ್ನತ ಶಿಕ್ಷಣ ಪಡೆದವರು ಗುತ್ತಿಗೆ ಆಧಾರದಲ್ಲಿ ವಿವಿಧೆಡೆ ಕೆಲಸ ಮಾಡುತ್ತಿದ್ದು, ಅವರಿಗೆ ಉದ್ಯೋಗ ಭದ್ರತೆ ನೀಡಬೇಕು. ವಾಹನ ಓಡಿಸಲು ಪರವಾನಗಿ ಕೊಡಬೇಕು ಎಂದು ಆಗ್ರಹಿಸಿದರು.
 ಮನವಿ ಸ್ವೀಕರಿಸಿದ ಮಹಾವೀರ ಮ. ಕರಣ್ಣವರ ಮಾತನಾಡಿ, ವಸತಿ ಹಾಗೂ ಉದ್ಯೋಗ ನೀಡುವ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
 ಸ್ಫೂರ್ತಿ ಸಂಸ್ಥೆಯ ನ್ಯಾಷನಲ್ ಟ್ರಸ್ಟ್ ಸಮಿತಿ ಸದಸ್ಯ ರೂಪಾನಾಯ್ಕ್, ಸಮಿತಿ ಸದಸ್ಯ ದುರುಗೇಶ್, ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ರಾಜಶೇಖರ, ಮಹಿಳಾ ಘಟಕದ ಅಧ್ಯಕ್ಷೆ ಬಿಂದು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net