ವಾರ್ಷಿಕ ಸರ್ವ ಸದಸ್ಯರ ಸಭೆ 12 ರಂದು

IMG-20250407-WA0065.jpg
Published on

ದಾವಣಗೆರೆ : ಭಾರತ ವಿಕಾಸ್ ಪರಿಷದ್ ಗೌತಮ ಶಾಖೆ ದಾವಣಗೆರೆಯ 2024-25 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆ ಮತ್ತು ಪರಿವಾರ ಮಿಲನ ಕಾರ್ಯಕ್ರಮ ಏ. 12 ರಂದು ನಗರದ ಡಾ. ಸದ್ಯೋಜಾತ ಹಿರೇಮಠದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಎ.ಎಸ್. ವಿಜಯ್ ಕುಮಾರ್ ಹೇಳಿದರು.  ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಜೆ 6ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಪ್ರಧಾನ ಕಾರ್ಯದರ್ಶಿ ಎಂ.ಆರ್. ಭವಾನಿ, ಇತರರು ಭಾಗವಹಿಸುವರು ಎಂದು ತಿಳಿಸಿದರು.  ಗೌತಮ ಶಾಖೆಯಿಂದ ಬಡ ಕುಟುಂಬದ ಮಹಿಳೆಯರಿಗೆ ಕೈಕಸೂತಿ ಮತ್ತು ಹೊಲಿಗೆ ತರಬೇತಿ ಶಿಬಿರವನ್ನು ಮೂರು ತಿಂಗಳ ಕಾಲ ವಿದ್ಯಾನಗರ ಎರಡನೇ ಬಸ್ ಸ್ಟಾಪ್ ಬಳಿ ಇರುವ ಕೇಂದ್ರದಲ್ಲಿ ನೀಡಲಾಗಿತ್ತು. ಅವರಿಗೆ ಸಭೆಯಲ್ಲಿ ಪ್ರಮಾಣಪತ್ರ ಕೊಡಲಾಗುವುದು. ಕೈ ಕಸೂತಿಗಳ ಪ್ರದರ್ಶನ, 2025-26 ನೇ ಸಾಲಿನ ನೂತನ ಪದಾಧಿಕಾರಿಗಳು ಮತ್ತು ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮ ಸಹ ನಡೆಯಲಿದೆ ಎಂದು ತಿಳಿಸಿದರು.  ಕಾರ್ಯದರ್ಶಿ ಎಂ.ಆರ್. ಮಧುಕರ್, ಪುಟ್ಟಪ್ಪ, ಅಕ್ಷಯ್ ಸುರ್ವೆ, ಪವನ್ ಕುಮಾರ್ ಇದ್ದರು.    

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net