'ಸಂವಿಧಾನವೇ ನಮ್ಮ ಸಿದ್ಧಾಂತ’ ಸಂಘಟನಾ ಸಭೆ ಇಂದು

dvg-G.B.-VINAY-KUMAR.jpg
Published on

ದಾವಣಗೆರೆ : ಸ್ವಾಭಿಮಾನಿ ಬಳಗದಿಂದ ‘ಸಂವಿಧಾನವೇ ನಮ್ಮ ಸಿದ್ಧಾಂತ’ ಸಂಘಟನಾ ಸಭೆಯನ್ನು ನಗರದ ಎಸ್.ಎಸ್. ಬಡಾವಣೆ ‘ಎ’ ಬ್ಲಾಕ್ 10ನೇ ಕ್ರಾಸ್‌ನಲ್ಲಿರುವ ಸ್ವಾಭಿಮಾನಿ ಬಳಗದ ಗೃಹ ಕಚೇರಿಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ.  ರಾಜ್ಯ ಸಮಿತಿ, ಜಿಲ್ಲಾ ಸಮಿತಿ, ತಾಲೂಕು ಸಮಿತಿಗಳ ರಚನೆ ಹಾಗೂ ಮೈಸೂರಿನಲ್ಲಿ ನಡೆಯುವ 2 ದಿನಗಳ ನಾಯಕತ್ವ - ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ಸಂಘಟನೆ ಬಗ್ಗೆ ಮುಕ್ತ ಚರ್ಚೆ ನಡೆಯಲಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net